ಅನುಷ್ಕಾ-ಕೊಹ್ಲಿ ಸಂಬಂಧ ದೂರ.. ದೂರ ..?

Update: 2016-02-02 12:54 GMT

ಹೊಸದಿಲ್ಲಿ, ಫೆ.2: ಭಾರತ ಸೆಲೆಬ್ರಿಟಿ ಜೋಡಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ.
 ಅರ್ಬಾಝ್ ಖಾನ್ ಮತ್ತು ಮಲೈಕಾ ಅರೋರಾ ಹದಿನೇಳು ವರ್ಷಗಳ ದಾಂಪತ್ಯ ಬದುಕಿಗೆ ಇತಿಶ್ರೀ ಹಾಡಿದ್ದಾರೆಂಬ ವದಂತಿ ಕೇಳಿ ಬಂದಿದೆ. ಇದೀಗ ಕೊಹ್ಲಿ ಮತ್ತು ಅನುಷ್ಕಾ ಜೋಡಿಯ ಸಂಬಂಧ ಹದಗೆಟ್ಟಿದೆ ಎಂಬ ಸುದ್ದಿ ಹರಡಿದೆ.
ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆ ಯಾವಾಗ? ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಇದು ಇವರ ನಡುವೆ ಸಂಬಂಧದಲ್ಲಿ ಬಿರುಕು ಉಂಟಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
 ವೆಬ್‌ಸೈಟ್ ಮೂಲಗಳ ಪ್ರಕಾರ ಚಿತ್ರ ನಿರ್ಮಾಪಕಿ ಹಾಗೂ ನಟಿಯಾಗಿರುವ ಅನುಷ್ಕಾ 2016ರಲ್ಲಿ ಪೂರ್ತಿಯಾಗಿ ತನ್ನನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. 2017ರಲ್ಲಿ ಮದುವೆಯ ಯೋಜನೆ ರೂಪಿಸಿದ್ದಾರೆ. ಇದು ಅನುಷ್ಕಾ ಮತ್ತು ಕೊಹ್ಲಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಹೀಗಿದ್ದರೂ ಕೊಹ್ಲಿಯ ಪ್ಲಾನ್ ಏನೆಂದು ಗೊತ್ತಾಗಿಲ್ಲ.
 ರಣಬೀರ್ ಕಪೂರ್ -ಕತ್ರಿನಾ ಕೈಫ್ , ಫರ್ಹಾನ ಅಖ್ತರ್-ಅಧುನಾ ಇವರ ನಡುವಿನ ಸಂಬಂಧ ಕಡಿಕೊಂಡ ಬೆನ್ನಲ್ಲೆ ಕೊಹ್ಲಿ-ಅನುಷ್ಕಾ ಸಂಬಂಧ ಮುರಿದು ಬಿದ್ದಿರುವ ಸುದ್ದಿ ಹರಡಿದೆ. ಆದರೆ ಇದನ್ನು ಕೊಹ್ಲಿ- ಅನುಷ್ಕಾ  ಧೃಡಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News