ಪೊಲೀಸರ ಸಮ್ಮುಖದಲ್ಲೇ ನನ್ನಮೇಲೆ ಹಲ್ಲೆ: ಕನ್ಹಯ್ಯ

Update: 2016-02-27 18:46 GMT

ದೂರು ನೀಡಿದರೂ ಆರೋಪಿಗಳನ್ನುಬಂಧಿಸದ ಪೊಲೀಸರು!
 ಕೋರ್ಟ್ ಆವರಣದಲ್ಲಿ ವಕೀಲರ ವೇಷದಲ್ಲಿ ಅಪರಿಚಿತರೂ ಇದ್ದರು!

ಹೊಸದಿಲ್ಲಿ ಫೆ.27: ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ತನ್ನ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳನ್ನು ಗುರುತಿಸಿ ದರೂ ಬಂಸಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಆರೋಪಿಸಿದ್ದಾರೆ.

ೆಬ್ರವರಿ 17ರಂದು ಕೋರ್ಟ್ ಆವರಣದಲ್ಲಿ ವಕೀಲರ ಒಂದು ಗುಂಪು ಜೆಎನ್‌ಯು ವಿದ್ಯಾರ್ಥಿ ಮುಖಂಡ ಹಾಗೂ ಮಾಧ್ಯಮ ಪ್ರತಿನಿಗಳ ಮೇಲೆ ಹಲ್ಲೆ ನಡೆಸಿತ್ತು. ಕೋರ್ಟ್ ಆವರಣದಲ್ಲಿ ನಡೆದ ದಾಂಧಲೆಯ ಬಗ್ಗೆ ವರದಿ ನೀಡಲು ಸುಪ್ರೀಂಕೋರ್ಟ್ ಐದು ಮಂದಿ ವಕೀಲರ ತಂಡವನ್ನು ರಚಿಸಿದೆ. ಕನ್ಹಯ್ಯೆ ವಕೀಲರ ತಂಡದ ಮುಂದೆ ನಡೆದ ಘಟನೆಯನ್ನು ವಿವರವಾಗಿ ಬಹಿರಂಗಪ ಡಿಸಿರುವುದನ್ನು, ಟಿವಿ ವಾಹಿನಿಯೊಂದು ಪ್ರಸಾರ ಮಾಡಿದೆ.ೋರ್ಟ್ ಆವರಣದಲ್ಲಿ ಹಲ್ಲೆ ಮಾಡಿದವರನ್ನು ಗುರು ತಿಸಿದರೂ ಪೊಲೀಸರು ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಅವರು ಸುಪ್ರೀಂಕೋರ್ಟ್‌ನ ತಂಡಕ್ಕೆ ಹೇಳಿದ್ದಾರೆ. ಈ ಕುರಿತ ವೀಡಿಯೊ ಸಿ ಎನ್‌ಎನ್-ಐಬಿಎನ್‌ಗೆ ಲಭಿಸಿದೆ.

 ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ನಡೆದ ಘಟನೆಯ ಬಗ್ಗೆ ಕನ್ಹಯ್ಯೆ ನೀಡಿದ ಮೊದಲ ಹೇಳಿಕೆ ಇದಾಗಿದೆ. ಕೋರ್ಟ್ ಗೇಟ್ ಬಳಿಗೆ ತನ್ನನ್ನು ಕರೆತಂದಾಗ ಮಾಧ್ಯಮ ಗಳು ಮುತ್ತಿಕೊಂಡವು. ಬಳಿಕ ಪೊಲೀಸರು ತನ್ನನ್ನು ಒಳಕ್ಕೆ ಕರೆ ತಂದರು. ಬಳಿಕ ವಕೀಲರ ಸಮವಸದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ಮಾಡಿದ. ಆ ಕ್ಷಣಕ್ಕಾಗಿಯೇ ಕಾಯುತ್ತ ಕೂತಿದ್ದಂತೆ, ತಾನು ಹೋದ ತಕ್ಷಣ ಹಲ್ಲೆ ಮಾಡಿದ. ಆತ ಬಂದಿದ್ದಾನೆ ಎಂದು ಇತರರಿಗೂ ಕೂಗಿ ಹೇಳುತ್ತಿದ್ದ. ಬಳಿಕ ಎಲ್ಲರೂ ತನ್ನ ಮೇಲೆ ದಾಳಿ ಮಾಡಿದರು. ತಾನು ತೀವ್ರವಾಗಿ ತತ್ತರಿಸಿದ್ದೆ ಎಂದು ಅವರು ವಿವರಿಸಿದ್ದಾರೆ. ಹೇಳಿಕೆ ನೀಡುವ ಸಂದರ್ಭದಲ್ಲಿ ಕನ್ಹಯ್ಯಾ ಗದ್ಗದಿತರಾಗಿದ್ದರು.ನ್ಹಯ್ಯಾರನ್ನು ಕರೆತಂದಿದ್ದ ಪೊಲೀಸರು ಕೂಡಾ ಹಲ್ಲೆ ಮಾಡಿದ್ದರೆಂದು ಅವರು ವಿವರಿಸಿದ್ದಾರೆ. ದಾಳಿಕೋರರು ದಾಳಿ ಮಾಡುವುದಕ್ಕೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಆ ವೇಳೆಗಾಗಲೇ ತಾನು ನೆಲದ ಮೇಲೆ ಬಿದ್ದಿದ್ದೆ. ಒಬ್ಬ ವ್ಯಕ್ತಿ ಆ ವೇಳೆಗೆ ಪಕ್ಕದ ಕೊಠಡಿಗೆ ಓಡಿ, ಹಿಂದೆ ಕುಳಿತುಕೊಂಡ. ಆತನನ್ನು ತಾನು ಗುರುತಿಸಿ, ಪೊಲೀಸರಿಗೆ ತಿಳಿಸಿದೆ. ಆತನ ಗುರುತನ್ನು ಪೊಲೀಸರು ಕೇಳಿದಾಗ ಪೊಲೀಸರ ಬಳಿ ಆತ ವಾಗ್ವಾದಕ್ಕೆ ಇಳಿದ. ಅವರ ಗುರುತಿನ ಪತ್ರ ಕೇಳಿದ. ಪೊಲೀಸರು ಆತನಿಗೆ ಏನೂ ಮಾಡಲಿಲ್ಲ. ಆತನನ್ನು ಸುಲಭವಾಗಿ ಬಂಸಬಹುದಿತ್ತು. ಆದರೆ ಏನೂ ಮಾಡಲಿಲ್ಲ ಎಂದು ಕನ್ಹಯ್ಯೆ ವಿವರಿಸಿದ್ದಾರೆ.ವ್ಯಕ್ತಿಯ ಬಗ್ಗೆ ದೂರು ನೀಡುವೆನೆಂದು ಪೊಲೀಸರಿಗೆ ತಿಳಿಸಿದೆ. ಆದರೆ ಅದಕ್ಕೆ ಪೊಲೀಸರು ಏನೂ ಕ್ರಮ ಕೈಗೊಳ್ಳಲಿಲ್ಲ. ಆ ಬಳಿಕ ತನ್ನನ್ನು ಕೂರಿಸಿ, ನೀರು ಕೊಟ್ಟರು. ಪೊ್ರೆೆಸರ್, ಪೊಲೀಸರ ಸಮ್ಮುಖದಲ್ಲೇ ತನ್ನ ಮೇಲೆ ನಡೆದ ಹಲ್ಲೆ ಬಗೆಗೆ ಪೊಲೀಸರಿಂದ ವಿವರಣೆ ಬಯಸಿದರು. ಮೊದಲ ಬಾರಿ ಕೋರ್ಟಿಗೆ ಬಂದಾಗ ತನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದೂ ನ್ಯಾಯಾೀಶರಿಗೆ ಹೇಳಿದ್ದೆ. ಆಗ ತನಗೆ ಯಾರೂ ವಕೀಲರು ಇರಲಿಲ್ಲ. ತಾನು ಇನ್ನೂ ಯುವಕ. ಜೆಎನ್‌ಯುನಲ್ಲಿ ಪಿಎಚ್‌ಡಿ ವಿದ್ಯಾರ್ಥಿ. ತನ್ನನ್ನು ರಾಷ್ಟ್ರದ್ರೋಹಿ ಎಂದು ಬಿಂಬಿಸಲಾಗಿದೆ. ಇದೀಗ ಮಾಧ್ಯಮದ ವಿಚಾರಣೆ ಎದುರಿಸಬೇಕಾಗಿದೆ. ಸಂವಿಧಾನದ ಬಗ್ಗೆ ತನಗೆ ಸಂಪೂರ್ಣ ನಂಬಿಕೆ ಇದೆ ಎಂದು ನ್ಯಾಯಾೀಶರಿಗೂ ಹೇಳಿದ್ದೆ. ವೈದ್ಯಕೀಯ ಪರೀಕ್ಷೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದೆ. ಆಗ ನ್ಯಾಯಾೀಶರು, ಈ ಸಂದರ್ಭದಲ್ಲಿ ಹೊರಕ್ಕೆ ಹೋದರೆ ಮತ್ತೆ ಹಲ್ಲೆ ನಡೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದರು ಎಂದವರು ಹೇಳಿದ್ದಾರೆ.ನ್ಹಯ್ಯಾರ ವಕೀಲೆ ವೃಂದಾಗ್ರೋವರ್ ಹಾಗೂ ಅವರ ಬೋಧ ವರ್ಗದ ಹಿಮಾಂಶು ಕೂಡಾ ತಮ್ಮ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ತಂಡದ ಮುಂದೆ ವ್ಯಕ್ತಪಡಿಸಿದ್ದಾರೆ.ಬ್ಬ ವ್ಯಕ್ತಿ ಹೊರ ಬಂದ. ಆತ ಕಪ್ಪು ಕನ್ನಡಕ ಧರಿಸಿದ್ದ. ಆತ ಧರಿಸಿದ್ದ ಕೋಟ್, ವಕೀಲರ ಕೋಟ್ ಆಗಿರಲಿಲ್ಲ. ಆತನ ಹೆಸರು ಕೇಳಿದಾಗ, ತನ್ನ ಹೆಸರನ್ನು ತಾನೇಕೆ ಹೇಳಬೇಕು ಎಂದು ಮರು ಪ್ರಶ್ನಿಸಿದ. ಆತ ಹೊರ ನಡೆದರೂ ಯಾರೂ ತಡೆಯಲಿಲ್ಲ. ಅಂಥ ಬಿಗಿ ಭದ್ರತೆಯಲ್ಲಿ ಆತ ಹೇಗೆ ಬರಲು ಮತ್ತು ಸರಾಗವಾಗಿ ಹೋಗಲು ಸಾಧ್ಯವಾಯಿತು ಎಂದು ವೃಂದಾ ಪ್ರಶ್ನಿಸಿದ್ದಾರೆ.
ಪೊಲೀಸ್ ನಿರ್ಲಕ್ಷದ ಬಗ್ಗೆ ಕನ್ಹಯ್ಯೆ ಮಾಡಿರುವ ಆರೋಪವನ್ನು ಬೆಂಬಲಿಸಿರುವ ಪ್ರೊೆಸರ್, ಆ ವ್ಯಕ್ತಿ ತನಗೆ ಹೊಡೆಯುತ್ತಿದ್ದಾನೆ ಎಂದು ಕನ್ಹಯ್ಯಾ ಪೊಲೀಸರಿಗೆ ತೋರಿಸಿ, ಬಂಸುವಂತೆ ಕೋರಿದ. ಆದರೂ ಹೈಕೋರ್ಟ್‌ನ ಮೂವರು ಅಕಾರಿಗಳೂ ಅದಕ್ಕೆ ಅವಕಾಶ ಮಾಡಿಕೊಟ್ಟರು. ಆತನನ್ನು ಹಿಡಿದುಕೊಳ್ಳುವಂತೆ ತಾನು ಕೂಗಿ ಹೇಳಿದೆ. ಆದರೆ ಆತ ಹೊರಟು ಹೋಗಲು ಅವಕಾಶ ಮಾಡಿಕೊಟ್ಟರು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News