ಪೆಟ್ರೋಲ್ ಲೀ.ಗೆ 3.02 ರೂ. ಇಳಿಕೆ, ಡೀಸೆಲ್ ಲೀ.ಗೆ 1.47 ರೂ. ಏರಿಕೆ

Update: 2016-02-29 18:38 GMT

ಹೊಸದಿಲ್ಲಿ,ಫೆ.29: ಸಾರ್ವಜನಿಕರಂಗದ ತೈಲ ಸಂಸ್ಥೆಗಳು ಸೋಮವಾರ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 3.02 ರೂ. ಇಳಿಕೆ ಮಾಡಿವೆ. ಆದರೆ ಡೀಸೆಲ್ ದರದಲ್ಲಿ ಪ್ರತಿ ಲೀ.ಗೆ 1.47 ರೂ.ಏರಿಕೆಯಾಗಿದೆ.

ತೈಲ ದರ ಪರಿಷ್ಕರಣೆಯಿಂದಾಗಿ ದಿಲ್ಲಿಯಲ್ಲಿ ಪ್ರತಿ ಲೀ.ಗೆ 59.93 ರೂ.ನಷ್ಟಿದ್ದ ಪೆಟ್ರೋಲ್ ದರವು 56.61 ರೂ.ಗೆ ಇಳಿಕೆಯಾಗಿದೆ. ಆದಾಗ್ಯೂ ಡೀಸೆಲ್ ದರವು ಪ್ರತಿ ಲೀಟರ್‌ಗೆ44.96 ರೂ.ನಿಂದ 46.43 ರೂ.ಗೆ ಏರಿಕೆಯಾಗಿದೆ. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಪೆಟ್ರೋಲ್ ದರದಲ್ಲಿ ಇಳಿಕೆಯಾಗಿರುವುದು ಇದು ಸತತ 7ನೆ ಸಲವಾಗಿದೆ. ಕಳೆದ ಫೆಬ್ರವರಿ 18ರಂದು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 32 ಪೈಸೆ ಕಡಿತ ಮಾಡಲಾಗಿತ್ತು.

ಡೀಸೆಲ್ ದರದಲ್ಲಿ ಹೆಚ್ಚಳವಾಗಿರುವುದು ಇದು ಎರಡನೆ ಸಲವಾಗಿದೆ.ಕಳೆದ ಬಾರಿ ಡೀಸೆಲ್ ದರದಲ್ಲಿ 28 ಪೈಸೆ ಏರಿಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News