ಈಗ ಸಂಸದರಿಗೆ ಕಾರಿನ ಗ್ಲಾಸುಗಳ ಟಿಂಟ್ ನಿಷೇಧ ಹಿಂದೆಗೆಸುವ ಚಿಂತೆ

Update: 2016-03-08 04:08 GMT

ನವದೆಹಲಿ, ಮಾ.8: ಕಾರುಗಳಿಗೆ ಬಣ್ಣದ ಟಿಂಟ್ ಹೊಂದಿರುವ ಗಾಜು ಮರುಕಳಿಸುವ ಎಲ್ಲ ಸೂಚನೆಗಳಿವೆ. ಇದಕ್ಕಾಗಿ ಸಂಸದರ ಒಂದು ಗುಂಪು ತೀವ್ರ ಲಾಬಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸುಮಾರು 10-12 ಮಂದಿ ಸಂಸದರು ಈ ವಿಷಯವನ್ನು ಇದೀಗ ರಸ್ತೆ ಸಾರಿಗೆ ಸಚಿವಾಲಯದ ಬಳಿಗೆ ಒಯ್ದಿದ್ದಾರೆ. ಈ ಸಂಬಂಧ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಡ ತರುತ್ತಿದ್ದಾರೆ. ಸುಪ್ರೀಂಕೋರ್ಟ್, ಕಾರುಗಳ ಗಾಜಿಗೆ ಟಿಂಟೆಡ್ ಫಿಲ್ಮ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಿತ್ತು. ಎಷ್ಟೇ ಪ್ರಮಾಣದ ಟಿಂಟ್‌ಗಳನ್ನಾದರೂ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.


ಇದೀಗ ಉತ್ಪಾದನೆ ವೇಳೆಯಲ್ಲೇ ಟಿಂಟ್ ಹಾಕಿದ ಗಾಜನ್ನು ಬಳಸಿದ್ದರೆ ಮಾತ್ರ, ಅದನ್ನು ಉಳಿಸಿಕೊಳ್ಳಲು ಅವಕಾಶವಿದೆ. ಅದು ಕೂಡಾ ಮುಂಬದಿ ಹಾಗೂ ಹಿಂಬದಿ ಗಾಜಿಗೆ ಶೇಕಡ 70ರಷ್ಟು ಪಾರದರ್ಶಕವಾಗಿರಬೇಕು ಮತ್ತು ಬದಿಯ ಗಾಜಿಗೆ ಶೇಕಡ 50ರಷ್ಟು ಪಾರದರ್ಶಕವಾಗಿರಬೇಕು. ಇದನ್ನು ಉಲ್ಲಂಘಿಸಿದರೆ ಅದು ಶಿಕ್ಷಾರ್ಹವಾಗುತ್ತದೆ. ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಕೃತ್ಯಗಳು ನಡೆಯುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು.


ಟಿಂಟೆಡ್ ಫಿಲ್ಮ್‌ಗಳ ಉತ್ಪಾದಕರು ಕೂಡಾ, ಹೊಸ ತಂತ್ರಜ್ಞಾನ ಮೂಲಕ ಹೆಚ್ಚು ಪಾರದರ್ಶಕವಾದ ಫಿಲ್ಮ್‌ಗಳನ್ನು ಮಾಡಲು ಸಾಧ್ಯವಿದ್ದು, ಅದರ ಬಳಕೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಉತ್ಪಾದಕರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News