ಹಸುಗಳಿಗಾಗಿ ಹೆಂಡತಿಯನ್ನು ತೊರೆದ ಉತ್ತರ ಪ್ರದೇಶದ ಭೂಪ..!

Update: 2016-03-21 08:03 GMT

 
ಕಾನ್ಪುರ, ಮಾ.21: ಆತನಿಗೆ ದನಕರುಗಳ ಮೇಲೆ ಅತಿಯಾದ ಪ್ರೀತಿ. ಗೋವುಗಳಿಗಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡಿರುವ  ಅಶ್ವಕ್ ಅಲಿ ಅಲಿಯಾಸ್‌ ಮುನ್ನಾ ಉತ್ತರ ಪ್ರದೇಶದ ಈಟವಾ ನಿವಾಸಿ. ಈತ ತನ್ನರುವ ಗೋವುಗಳಿಗಾಗಿ ಹೆಂಡತಿಯನ್ನು ತೊರೆದಿದ್ದಾನೆ.
ಕೆಲವು ರಾಜ್ಯಗಳಲ್ಲಿ ಗೋರಕ್ಷಣಾ  ಸಂಘಟನೆಗಳು ಗೋಹತ್ಯಾ ಆರೋಪದಲ್ಲಿ ಮುಸ್ಲಿಮರ ಮೇಲೆ  ದಾಳಿ ನಡೆಸುವ ಮತ್ತು ಗೋ ಮಾಂಸ ತಿಂದವರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಆಗಾಗ ಕಂಡು ಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ಅಸ್ಫಕ್‌ ಇಲ್ಲೊಬ್ಬ ಅಪರೂಪದ ಗೋರಕ್ಷಕನಾಗಿ ಗಮನ ಸೆಳೆದಿದ್ದಾರೆ.
2001ರಲ್ಲಿ ಅಸ್ಫಕ್‌  ಸ್ಥಳೀಯ ಯುವತಿ ಅಫ್ರೋಝ್  ಜಹಾನ್‌ನನ್ನು ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯ ಬದುಕು ಹೆಚ್ಚು ಸಮಯ ಇರಲಿಲ್ಲ. ಈತನಿಗೆ ಗೋವುಗಳ ಮೇಲಿರುವ ಅತಿಯಾದ ಮಮತೆ ಹೆಂಡತಿಯನ್ನು ದೂರ ಮಾಡಿತು. ಅದೊಂದು ದಿನ ಈತನ ಹೆಂಡತಿ ಜಹಾನ್‌ ಕೇಳಿಯೆ ಬಿಟ್ಟಲು " ನಿಮಗೆ ನಾನು ಬೇಕೇ ಅಥವಾ ಗೋವುಗಳು ಬೇಕೇ? ಎಂದು ತೀರ್ಮಾನಿಸಿ” ಎಂದಾಗ ಅಸ್ಫಕ್‌ ಗೋವುಗಳನ್ನು ಬಿಡಲು ತಯಾರಾಗಲಿಲ್ಲ. ಇದರಿಂದಾಗಿ ಆಕೆ ತವರು ಮನೆ ಸೇರಿದಳು. ಅಸ್ಫಕ್‌ ಹೆಂಡತಿ ಮನೆಯ ಕಡೆಗೆ ತಿರುಗಿಯೂ ನೋಡಲಿಲ್ಲ. ಗ್ರಾಮಸ್ಥರು ಇವರನ್ನು ಒಂದುಗೂಡಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
" ನಾನು ಇನ್ನೊಬ್ಬಳಿಗಾಗಿ ಹೆಂಡತಿಯನ್ನು ದೂರ ಮಾಡಿಲ್ಲ. ನನ್ನ ಹಸುಗಳಿಗಾಗಿ ಹೆಂಡೆತಿಯನ್ನು ತೊರೆದೆ ” ಎಂದು ಅಸ್ಫಕ್‌ ಹೇಳುತ್ತಾರೆ.
ಅಸ್ಫಕ್‌ ಬಳಿ ಹದಿನೈದು ಹಸುಗಳಿವೆ. ಬೆಳಗ್ಗೆ ಎದ್ದು ಹಾಲು ಕರೆದು ಪೇಟೆಯಲ್ಲಿ ಮಾರಿ ಬರುವಾಗ ಹಸುಗಳಿಗೆ ಬೇಕಾಗುವ ಹಿಂಡಿ, ಹಸಿರು ಹುಲ್ಲನ್ನು ತರುತ್ತಾರೆ. ತನ್ನ ಬದುಕನ್ನು ಅಸ್ಫಕ್‌ ಮೂಕ ಪ್ರಾಣಿಗಳಿಗಾಗಿ ಸಮರ್ಪಿಸಿಕೊಂಡಿದ್ದಾರೆ ಮೂಲತ: ಕಾನ್ಪುರದ ದೆಹಾತ್‌ ಜಿಲ್ಲೆಯ ಅಸ್ಫಕ್‌  ಕಳೆದ ಮೂವತ್ತು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News