‘ಆರೆಸ್ಸೆಸ್ ಮುಖ್ಯಸ್ಥರಿಗೆ ಅವಮಾನ’

Update: 2016-03-21 09:36 GMT

ಭೋಪಾಲ್ :ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಅವಹೇಳನಗೈದು ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದ ಮುಸ್ಲಿಂ ಯುವಕನೊಬ್ಬನನ್ನುಮಧ್ಯಪ್ರದೇಶದ ಶಿಯೋಪುರ್ ಪೊಲೀಸರು ನಾಲ್ಕು ತಿಂಗಳ ಹಿಂದೆ ಬಂಧಿಸಿದ್ದರೆ ಇದೀಗ ಪೊಲೀಸರಿಗೆ ಆತನ ವಿರುದ್ಧ ಹೇಗೆ ಚಾರ್ಜ್‌ಶೀಟ್ ಹಾಕುವುದೆಂದೇ ತಿಳಿಯದಾಗಿದೆ. ಕಾರಣವಿಷ್ಟೇ. ಕೆಲವು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಐಟಿ ಕಾಯಿದೆಯ ಸೆಕ್ಷನ್ 66(ಎ) ಅನ್ವಯ ಈ ಯುವಕನ ಬಂಧನವಾಗಿತ್ತು.

ಇಪ್ಪತೈದು ವರ್ಷದ ಸತ್ತಾರ್ ಖಾನ್‌ನನ್ನು ಪೊಲೀಸರು ಶಿಯೋಪುರ್ ಪಟ್ಟಣದ ಬಲಪುರ ಪ್ರದೇಶದಿಂದ ನವೆಂಬರ್ 2,2015ರಂದು ಬಂಧಿಸಿ ಆತನ ವಿರುದ್ಧ ಅಸ್ತಿತ್ವವೇ ಇಲ್ಲದ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿದ್ದರು. ಆತನನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

‘‘ಈ ಪ್ರಕರಣದಲ್ಲಿ ಹೇಗೆ ಮುಂದುವರಿಯುವುದೆಂದು ನಮಗೆ ತಿಳಿಯದಾಗಿದೆ. ಸೆಕ್ಷನ್ 66(ಎ)ಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆಯೆಂದ ನಮಗೆ ನಂತರವಷ್ಟೇ ತಿಳಿದು ಬಂದಿತ್ತು. ಜಿಲ್ಲಾ ಪ್ರಾಸಿಕ್ಯೂಶನ್ ಕಚೇರಿಗೆ ನಾವು ಪ್ರಕರಣದ ವಿವರಗಳನ್ನು ಸಲ್ಲಿಸಿದ್ದೇವೆ,’’ಎಂದುಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಸತೀಶ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

‘‘ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರು ಖಾನ್ ಫೇಸ್ಬುಕ್ ಪೋಸ್ಟಿನಿಂದ ಆಕ್ರೋಶಿತರಾಗಿದ್ದುದರಿಂದ ಹಾಗೂ ಪ್ರಕರಣ ದಾಖಲಿಸಲು ದೊಡ್ಡ ಸಂಖ್ಯೆಯ ಜನರುಠಾಣೆಗೆ ಆಗಮಿಸಿಸದ್ದರಿಂದನಾವು ಅವನನ್ನು ಬಂಧಿಸಿದೆವು,’’ಎಂದು ಚೌಹಾಣ್ ಹೇಳಿದರು.

ಶಿಯೋಪುರ್ ಪೊಲೀಸರು ಈ ಪ್ರಕರಣದಲ್ಲಿ ಗೊಂದಲದಲ್ಲಿರುವಾಗ, ಅನುಪ್ಪುರ್ ಪೊಲೀಸರು ಇನ್ನೊಬ್ಬ ಮುಸ್ಲಿಂ ಯುವಕನನ್ನು ಅದೇ ಕಾಯಿದೆಯನ್ವಯ ಅದೇ ಆರೋಪದ ಮೇಲೆ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾದ ಯುವಕನ ಹೆಸರು ಮೊಹಮ್ಮದ ಡ್ಯಾನಿಶ್ ಆಗಿದ್ದುಆತ ಒಂದು ವಾರದ ಹಿಂದೆ ಮಾಡಿದ ಫೇಸ್ಬುಕ್ ಪೋಸ್ಟ್ ಆಧರಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆತಛತ್ತೀಸ್‌ಗಢದ ರಾಯಪುರದಲ್ಲಿರುವ ಐಟಿಐ ಒಂದರ ವಿದ್ಯಾರ್ಥಿಯಾಗಿದ್ದಾನೆ. ಆತನನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ಯುವಕ ಕೊಲೆಯತ್ನ ಪ್ರಕರಣ ಸೇರಿದಂತೆ ಹಲವು ಇತರ ಪ್ರಕರಣಗಳಲ್ಲಿ ಬೇಕಾಗಿದ್ದವನೆಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ನಂತರ ಖರ್ಗೋನ್ ಜಿಲ್ಲೆಯಲ್ಲಿಆರೆಸ್ಸೆಸ್ ಮುಖ್ಯಸ್ಥರ ತಿರುಚಿದ ಚಿತ್ರವನ್ನು ಶೇರ್ ಮಾಡಿದ ಆರೋಪದ ಮೇಲೆಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News