ಲಂಡನ್ ವಿಮಾನ ನಿಲ್ದಾಣದಲ್ಲಿ ಅಕ್ಷಯ್ ಕುಮಾರ್ ಇಮಿಗ್ರೇಶನ್ ಅಧಿಕಾರಿಗಳ ವಶಕ್ಕೆ !

Update: 2016-04-07 05:16 GMT

ಮುಂಬೈ : ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಸೂಕ್ತ ವೀಸಾ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಸುಮಾರುಒಂದೂವರೆ ಗಂಟೆಗಳ ಕಾಲ ಅವರ ವಿಚಾರಣೆ ನಡೆಸಿದ ಘಟನೆ ಬುಧವಾರ ನಡೆದಿದೆಯೆಂದು ಮುಂಬೈ ಮಿರರ್ ವರದಿ ಮಾಡಿದೆ.

ತನ್ನ ಖಾಸಗಿ ತರಬೇತುದಾರನ ಜತೆ ಮುಂಬೈನಿಂದ ಲಂಡನ್ನಿಗೆ ತಮ್ಮಮುಂಬರುವ ಚಿತ್ರ ‘ರುಸ್ತೊಂ’ನ 15 ದಿನದ ಚಿತ್ರೀಕರಣಕ್ಕೆಆಗಮಿಸಿದ ಅಕ್ಷಯ್ ಅವರನ್ನು ಬ್ರಿಟಿಷ್ ಕಾಲಮಾನದ ಪ್ರಕಾರಬೆಳಿಗ್ಗೆ7 ಗಂಟೆಯಿಂದ 8.45ರ ತನಕ ವಶಕ್ಕೆ ಪಡೆದುಕೊಳ್ಳಲಾಗುವ ಪ್ರಯಾಣಿಕರನ್ನು ವಿಚಾರಣೆ ನಡೆಸುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಶ್ನಿಸಲಾಯಿತು.

ಕೆನಡಾದ ನಾಗರಿಕನೊಬ್ಬಇಂಗ್ಲೆಂಡಿಗೆ ಪ್ರವಾಸಿಗನಾಗಿ ಆಗಮಿಸುವುದಾದರೆ ವೀಸಾ ಅಗತ್ಯವಿಲ್ಲದಿದ್ದರೂ, ನಟ ತಾನು ಚಿತ್ರೀಕರಣಕ್ಕಾಗಿ ಆಗಮಿಸಿರುವುದಾಗಿ ಹೇಳಿರುವುದರಿಂದ ಅವರಿಗೆ ವೀಸಾ ಸ್ಟ್ಯಾಂಪ್ ಅಗತ್ಯವಾಗಿತ್ತು.

ಅಕ್ಷಯ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದ ಸಂದರ್ಭ ಅಲ್ಲಿದ್ದ ಅವರ ಕೆಲವು ಅಭಿಮಾನಿಗಳು ಅವರ ಫೊಟೋ ಕ್ಲಿಕ್ಕಿಸಲು ಆರಂಭಿಸಿದ್ದರು. ತನ್ನನ್ನು ಯಾರಿಗೂ ಕಾಣಿಸದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಿಸುವಂತೆ ಅಕ್ಷಯ್ ಕೇಳಿಕೊಂಡರೂ ಅಧಿಕಾರಿಗಳು ಸಮ್ಮತಿಸಲಿಲ್ಲವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News