ಮಧ್ಯಪ್ರದೇಶ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮುಂದಾದ ಪೊಲೀಸ್‌ ಸಿಬ್ಬಂದಿ ಮೇಲೆ ಟ್ರ್ಯಾಕ್ಟರ್ ಹರಿಸಿದ ಚಾಲಕ

Update: 2024-05-05 07:19 GMT

ಸಾಂದರ್ಭಿಕ ಚಿತ್ರ

ಶೆಹದೋಲ್: ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹರಿದು ಅವರು ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ಸಂಜೆ ನಡೆದಿದೆ.

ಮಹೇಂದ್ರ ಬಗ್ರಿ ಎಂಬ ಎಎಸ್‍ಐ, ಇತರ ಇಬ್ಬರು ಕಾನ್‍ಸ್ಟೇಬಲ್‍ಗಳಾದ ಪ್ರಸಾದ್ ಕನೋಜಿ ಮತ್ತು ಸಂಜಯ್ ದುಬೆ ಎಂಬುವವರ ಜತೆಗೆ ಅಕ್ರಮ ಮರಳು ಗಣಿಗಾರಿಕೆ ಪರಿಶೀಲನೆಗಾಗಿ ತೆರಳಿದ್ದರು. ವೇಗವಾಗಿ ತೆರಳುತ್ತಿದ್ದ ಮರಳು ಸಾಗಾಟದ ಟ್ರ್ಯಾಕ್ಟರ್ ನಿಲ್ಲಿಸುವ ಪ್ರಯತ್ನದಲ್ಲಿ ಅವರು ಚಕ್ರದ ಅಡಿಗೆ ಸಿಲುಕಿ ಮೃತಪಟ್ಟರು ಎಂದು ಹೇಳಲಾಗಿದೆ.

ಮಹೇಂಧ್ರ ಬಗ್ರಿ ಸ್ಥಳದಲ್ಲೇ ಅಸು ನೀಗಿದ್ದು, ಮನೋಜಿ ಮತ್ತು ದುಬೆ ಯಾವುದೇ ಗಾಯಗಳಿಲ್ಲದೇ ಪಾರಾದರು. ಚಾಲಕ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ. ಟ್ರ್ಯಾಕ್ಟರ್ ಮಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಕ್ ಮಾಲಕನ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು 30 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಮರಳು ಮಾಫಿಯಾ ನಡೆಸುತ್ತಿದ್ದ ಅಶುತೋಷ್ ಸಿಂಗ್ ಮತ್ತು ಅವರ ಮಗ ಸುರೇಂದ್ರ ಸಿಂಗ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ನೂರಾರು ಡಂಪರ್‍ಗಳು ಸನ್ ಬದಿಯ ದಂಡೆಯಲ್ಲಿ ಮರಳು ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News