ಕಳ್ಳನೆಂದು ಶಂಕಿಸಿ ಹೊಡೆದ ಊರ ಜನ: ಕೇರಳದಲ್ಲಿ ಅಸ್ಸಾಂ ವ್ಯಕ್ತಿಯ ಸಾವು!

Update: 2016-05-05 07:23 GMT

ಕೋಟ್ಟಯಂ, ಮೇ 5: ಕಳ್ಳನೆಂದು ಶಂಕಿಸಿ ಒಂದಷ್ಟು ಜನರು ಗುಂಪುಗೂಡಿ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ಹೊಡೆದ ಅಸ್ಸಾಂನ ಕಂಡ್ರಾ ಗ್ರಾಮದ ಕೈಲಾಸ್ ಜ್ಯೋತಿ ಬೆಹ್ರಾ (30) ಎಂಬ ವ್ಯಕ್ತಿ ಮೃತರಾಗಿದ್ದಾರೆ.ಬುಧವಾರ ಮಧ್ಯಾಹ್ನ ಹನ್ನೆರಡು ಮತ್ತು ಒಂದು ಗಂಟೆಯ ನಡುವೆ ಮಲಕುನ್ನಂ ಚಿರವುವು ಮುಟ್ಟಂ ದೇವಳದ ಸಮೀಪ ಘಟನೆ ನಡೆದಿತ್ತು ಎಂದು ವರದಿಯಾಗಿದೆ.

ಘಟನೆಯ ಕುರಿತು ಪೊಲೀಸರು ಹೇಳುವ ಪ್ರಕಾರ ಅಸ್ಸಾಮ್‌ನ ದಿಬ್ರುಗಡದ ಗೆಳೆಯರಾದ ರೂಪಂ ಗೋಗೋಯ್, ಗೋಕುಲ್ ಗೋಗೋಯ್ ಎಂಬವರ ಜೊತೆ ಬುಧವಾರ ಬೆಳಗ್ಗೆ ಕೈಲಾಸ್ ಕೋಟ್ಟಯಂ ರೈಲ್ವೆ ಸ್ಟೇಶನ್‌ಗೆ ಬಂದಿದ್ದರು. ಕೋಟ್ಟಯಂದಿಂದ ಮೂವರೂ ಪೂವನ್ತುರುತ್ ಇಂಡಸ್ಟ್ರೀಯಲ್ ಏರಿಯಾಕ್ಕೆ ಬಂದರು. ಪೂವನ್ತುರುತ್‌ನಲ್ಲಿ ಗೆಳೆಯರಿಂದ ಅಗಲಿದ ಕೈಲಾಸ್ ಅಲೆದಾಡುತ್ತಿದ್ದರು. ಈ ಸಂದರ್ಭದಲ್ಲಿ ಈತ ಕಳ್ಳನೆಂದು ಭಾವಿಸಿದ ಊರಿನ ಕೆಲವರು ಹೊಡೆದರು. ಚಿರವುಮುಟ್ಟಂ ಎಂಬಲ್ಲಿ ಈತನಿಗೆ ಕಲ್ಲೆಸೆದು ಓಡಿಸಲು ಪ್ರಯತ್ನಿಸಿದರೂ ಈತ ಓಡಿಹೋಗಲಿಲ್ಲ.

ಆದ್ದರಿಂದಗುಂಪು ಗೂಡಿದ ಜನರನ್ನು ನೋಡಿ ಓಡಿ ಪಾರಾಗಲು ನೋಡಿ ಸಮೀಪದ ಮನೆಯ ಸ್ನಾನದ ಕೋಣೆಗೆ ನುಗ್ಗಿದ್ದರು. ಇಲ್ಲಿಂದ ಜನರು ಕೈಲಾಸ್‌ನನ್ನು ಹಿಡಿದು ಕೈಕಾಲು ಕಟ್ಟಿ ಹೊಡೆದರು. ಪೊಲೀಸರು ಬರುವಾಗ ಕೈಕಾಲುಗಳು ಕಟ್ಟಿಹಾಕಿದ ಸ್ಥಿತಿಯಲ್ಲಿ ರಸ್ತೆಯಲ್ಲಿ ಜನರು ಬಿಸಾಕಿದ್ದರು. ಬಾಯಿಯಿಂದ ನೊರೆ ಬರುತ್ತಿತ್ತು. ಕೂಡಲೇ ಕೋಟ್ಟಯಂ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ನಂತರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರೂ ಆತ ಉಳಿಯಲಿಲ್ಲ. ಪೊಸ್ಟ್‌ಮಾರ್ಟಂ ವರದಿ ಲಭಿಸಿದರೆ ಮಾತ್ರವೇ ಸಾವಿಗೆ ಕಾರಣವೆಂದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಮರಣ ಎಂದು ಪೊಲೀಸರು ಕೇಸು ದಾಖಲಿಸಿದ್ದಾರೆ. ಊರು ಪರಿಚಯ ವಿಲ್ಲದ ಈತ ಬಸ್ ಬದಲಾಗಿ ಚಿರವುಮುಟ್ಟಂಗೆ ತಲುಪಿರಬೇಕೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News