ಕಾಶ್ಮೀರಿಗಳತ್ತ ಬೆರಳು ತೋರಿಸಿದರೆ ಜಾಗ್ರತೆ: ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ

Update: 2016-05-09 06:12 GMT

ಶ್ರೀನಗರ, ಮೇ 9: ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತ್ತಾ ಮೆಹಬೂಬು ಮುಫ್ತಿ ಒಂದು ವೇಳೆ ಕಾಶ್ಮೀರಿಗಳತ್ತ ಯಾರಾದರೂ ಬೆರಳು ತೋರಿಸಿದರೆ ಗುದ್ದು ತಿನ್ನಲಿದ್ದಾರೆ ಎಂದು ಗುಡುಗಿರುವುದಾಗಿ ವರದಿಯಾಗಿದೆ. ಅವರ ಇಂತಹ ಹೇಳಿಕೆಗಳಿಂದ ಮೆಹಬೂಬ ಮತ್ತು ಕೇಂದ್ರ ಸರಕಾರದ ನಡುವೆ ಮಧುರ ಸಂಬಂಧವಿಲ್ಲ ಎಂಬುದು ತಿಳಿಯುತ್ತದೆ. ವರದಿಯಾಗಿರುವ ಪ್ರಕಾರ ಭಾರತ -ಪಾಕ್ ವಿಭಜನೆಯ ನಂತರ ಜಮ್ಮು-ಕಾಶ್ಮೀರ ರಾಜ್ಯ ಸಂಕಷ್ಟಕ್ಕೆ ಸಿಲುಕಿತು. ಅದೀಗಲೂ ಮುಂದುವರಿಯುತ್ತಿದೆ ಎಂದೂ ಮೆಹಬೂಬ ತೀಕ್ಷ್ಣವಾಗಿ ಹೇಳಿದ್ದಾರೆ.
ಪ್ರಧಾನಿಯ ಪಾಕಿಸ್ತಾನ ಪ್ರವಾಸದ ಕುರಿತು ಪ್ರಸ್ತಾಪಿಸಿದ ಮೆಹಬೂಬ ಮಾತುಕತೆಯ ಸರಣಿ ಆರಂಭವಾಯಿತು ಎಂದು ಖುಶಿಯಾಗಿತ್ತು. ಆದರೆ ಪಾಕಿಸ್ತಾನಮತ್ತು ಭಾರತ ಎರಡರಲ್ಲೂ ಶಾಂತಿಯನ್ನು ಬಯಸದ ಕೆಲವರಿದ್ದಾರೆ. ಈ ಜಗಳ ಮುಂದುವರಿಯುತ್ತಲೇ ಇರಲಿ ಎಂದು ಅವರು ಬಯಸುತ್ತಿದ್ದಾರೆ ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಖಾದಿ ಪ್ರದರ್ಶನದ ವೇಳೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಸಚಿವ ಕಲ್‌ರಾಜ್‌ಮಿಶ್ರಾ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 ಪಿಡಿಪಿ-ಬಿಜೆಪಿ ಸಖ್ಯವನ್ನು ಉಲ್ಲೇಖಿಸಿದ ಮೆಹಬೂಬ ಮಾಜಿಮುಖ್ಯಮಂತ್ರಿ ಮುಫ್ತಿಮುಹಮ್ಮದ್ ಸಯೀದ್ ರಾಜ್ಯದ ಯುವಕರ ಹಿತದೃಷ್ಟಿಯನ್ನು ಮುಂದಿಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದ ಯುವ ಶಕ್ತಿಯ ಭವಿಷ್ಯಕ್ಕಾಗಿ ಅವರು ಈ ಸಖ್ಯಕ್ಕೆ ಮುಂದಾಗಿದ್ದರು ಎಂದು ಹೇಳಿದ್ದಾರೆ. ಮೈತ್ರಿ ಅವರಿಗೆ ಮುಳ್ಳಿನ ಕಿರೀಟವಾಗಿದೆ. ಇದರ ಹೊರತಾಗಿಯೂ ಪಿಡಿಪಿ ದೇಶದ ಖಜಾನೆಯು ಜಮ್ಮು ಕಾಶ್ಮೀರದ ಜನರಿಂದ ಬೇರೆಡೆಗೆ ಮುಖತಿರುಗಿಸದಿರಲಿ ಎಂಬ ಕಾರಣಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಯಿತೆಂದು ಮೆಹಬೂಬ ಹೇಳಿದ್ದಾರೆ.
ನೀವು(ಕೇಂದ್ರ0 ಹತ್ತು ಹೆಜ್ಜೆ ನಡೆದರೆ ಕಾಶ್ಮೀರಿ ಹತ್ತು ಹೆಜ್ಜೆ ನಡೆಯುತ್ತಾನೆ ಮತ್ತು ನೀವು ಒಂದು ಮೇಳೆ ಅವನಿಗೆ ಬೆರಳು ತೋರಿಸಿದರೆ ಮುಷ್ಠಿ ತೋರಿಸಲಿದ್ದಾನೆ ಎಂದು ಹೇಳಿ ಮೆಹಬೂಬ ಅಟಲ್‌ಬಿಹಾರಿ ಒಂದು ಹೆಜ್ಜೆ ಇಡುವಾಗ ತಮ್ಮ ಜನರು ಹತ್ತು ಹೆಜ್ಜೆ ಮುಂದಿಟ್ಟಿದ್ದರು ಎಂಬುದನ್ನೂ ಪ್ರಸ್ತಾಪಿಸಿದ್ದಾರೆ. ಪಾರ್ಲಿಮೆಂಟ್ ದಾಳಿ ಆರೋಪಿ ಅಫ್ಝಲ್ ಗುರುಗೆ ಗಲ್ಲು ಶಿಕ್ಷೆ ನೀಡಿದ್ದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನಮ್ಮ ಓರ್ವ ಕಾಶ್ಮೀರಿ ಯುವಕನಿಗೆ ಗಲ್ಲು ಶಿಕ್ಷೆ ನೀಡಲಾಯಿತು. ಯಾಕೆ ನೀಡಲಾಯಿತು. ಯಾವುದಕ್ಕಾಗಿ ನೀಡಲಾಯಿತು. ಸರಿಯಾಗಿತ್ತು ಇಲ್ಲ ತಪ್ಪಾಗಿತ್ತು, 28 ನವೆಂಬರ್‌ನಂದು ಎಬ್ಬಿಸಿ ಮೊದಲು ಗಲ್ಲು ನೀಡಲಾಯಿತು ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News