ಪ್ರಚಾರದ ಹಾಡಿಗೆ ಚುನಾವಣಾ ಆಯೋಗದಿಂದ ನಿಷೇಧ: ಎಎಪಿ ಆರೋಪ

Update: 2024-04-28 12:53 GMT

ಅತಿಶಿ | Photo: X \ @AtishiAAP

ಹೊಸದಿಲ್ಲಿ: ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷವು ರವಿವಾರ ಆರೋಪಿಸಿದೆ.

ಇತ್ತೀಚೆಗಷ್ಟೇ 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಎಂಬ ಚುನಾವಣಾ ಪ್ರಚಾರ ಹಾಡನ್ನು ಆಮ್‌ ಆದ್ಮಿ ಪಕ್ಷವು ಬಿಡುಗಡೆಗೊಳಿಸಿತ್ತು.

ಈ ಹಾಡು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂದು ಚುನಾವಣಾ ಆಯೋಗ ನಿಷೇಧ ಹೇರಿರುವುದಾಗಿ ಆಮ್‌ ಆದ್ಮಿ ಪಕ್ಷವು ಹೇಳಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ನಾಯಕಿ ಅತಿಶಿ, “ಇದೇ ಮೊದಲ ಬಾರಿಗೆ ಪಕ್ಷವೊಂದರ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಹಾಡಿನಲ್ಲಿ ಬಿಜೆಪಿ ಅಥವಾ ಮಾದರಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನೂ ಉಲ್ಲಂಘಿಸಿಲ್ಲ. ವಿಡಿಯೊ ಮತ್ತು ಘಟನೆಗಳನ್ನು ಮಾತ್ರ ಆಧರಿಸಿವೆ” ಎಂದು ಅವರು ಹೇಳಿದ್ದಾರೆ.

'ಬಿಜೆಪಿ ಸರ್ವಾಧಿಕಾರಯಾದ್ದರಿಂದ ಏನು ಮಾಡಿದರೂ ಅದು ಸರಿ. ಯಾರೇ ಅದರ ವಿರುದ್ಧ ಮಾತನಾಡಿದರೆ ಅದು ತಪ್ಪು. ಇದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತೋರಿಸುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ” ಎಂದು ಅವರು ಮನವಿ ಮಾಡಿದ್ದಾರೆ.

ಎರಡು ನಿಮಿಷಗಳ ಆಮ್‌ ಆದ್ಮಿ ಪಕ್ಷದ ಪ್ರಚಾರದ ಹಾಡನ್ನು ಎಎಪಿ ಶಾಸಕ ದಿಲೀಪ್ ಪಾಂಡೆ ಹಾಡಿದ್ದಾರೆ. ಗುರುವಾರ ಇದನ್ನು ಬಿಡುಗಡೆಗೊಳಿಸಲಾಗಿತ್ತು.

ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News