ಮದರ್ಸ್-ಡೆಯಂದೇ ಕನ್ಹಯ್ಯರಿಂದ "ಸ್ಮತಿ ಮಾತೆ"ಗೆ ಪತ್ರ!

Update: 2016-05-09 06:10 GMT

ಹೊಸದಿಲ್ಲಿ, ಮೇ 9: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾಕುಮಾರ್ ಮದರ್ಸ್ ಡೇ ದಿನದ ಸಂದರ್ಭದಲ್ಲಿ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರಿಗೆ ಪತ್ರ ಬರೆದು ಪೂರ್ವಾಗ್ರಹ ಪ್ರೇರಿತ ವರದಿ ಮತ್ತು ಆಕ್ರಮಣಕಾರಿಯಾದ ಒಂದು ವೀಡಿಯೋದ ಆಧಾರದಲ್ಲಿ ಒಬ್ಬಳು ತಾಯಿ ತನ್ನ ಮಕ್ಕಳನ್ನು ಹೇಗೆ ದಂಡಿಸಲು ಸಾಧ್ಯ? ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.
  ಎಲ್ಲ ವಿದ್ಯಾರ್ಥಿಗಳು ತನ್ನ ಮಕ್ಕಳೇ ಎಂದಿರುವ ಇರಾನಿಯವರನ್ನು ಈ ಸಂದರ್ಭದಲ್ಲಿ ವ್ಯಂಗ್ಯವಾಗಿ ಅಭಿ ಸಂಬೋಧಿಸಿ ತಮ್ಮ ಮಾತೃಸಮಾನ ಪ್ರೀತಿಯನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಕನ್ಹಯ್ಯಾ ತಮ್ಮ ಆಳ್ವಿಕೆಯ ಸಮಯದಲ್ಲಿ ಪೊಲೀಸರ ನಡುವೆ ಮತ್ತು ಹಸಿದು ಹೇಗೆ ಕಲಿಯಬಹುದೆಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ಈ ಪತ್ರದಲ್ಲಿ ಕನ್ಹಯ್ಯಾ ಬರೆದಿರುವುದಾಗಿ ವರದಿಯಾಗಿದೆ.
 ಬಹಿರಂಗ ಪತ್ರದಲ್ಲಿ ಈ ಸಂಶೋಧನಾ ವಿದ್ಯಾರ್ಥಿಯು ಸಚಿವೆ ಇರಾನಿಯವರಿಗೆ "ರಾಷ್ಟ್ರವಿರೋಧಿ"ಗಳ "ಅತಾರ್ಕಿಕ" ಮಾತೆ ಎಂದು ಹೇಳುತ್ತಾ ಮದರ್ಸ್ ಡೇ ಯಂದು ವಿದ್ಯಾರ್ಥಿಗಳ ವತಿಯಿಂದ ಅವರಿಗೆ ಶುಭಕಾಮನೆಗಳನ್ನು ಕಳುಹಿಸಿದ್ದಾರೆ. ಕನ್ಹಯ್ಯಾ ಓರ್ವ ತಾಯಿ ಭಾರತದಂತಹ ದೇಶದಲ್ಲಿ ತನ್ನ ಮಗನನ್ನು ಹೇಗೆ ಆತ್ಮಹತ್ಯೆಗೆ ನಿರ್ಬಂಧಿಸಬಲ್ಲಳು? ಆಕ್ರಮಣಕಾರಿ ವೀಡಿಯೋ ಮತ್ತು ಪೂರ್ವ ಗ್ರಹ ಪ್ರೇರಿತ ವಿಚಾರಣೆಯ ಆಧಾರದಲ್ಲಿ ತಮ್ಮ ಮಕ್ಕಳನ್ನು ದಂಡಿಸಲುೆ ಆತಾಯಿ ಒಪ್ಪುವಳೇ ಎಂದು ಕನ್ಹಯ್ಯಾ ಪತ್ರದಲ್ಲಿ ಪ್ರಶ್ನಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News