ಚೀನಾದಲ್ಲಿ ಎಲ್ಲದರ ನಕಲಿ ಸಿಗುತ್ತೆ, 'ಭಾರತದ ರಾಷ್ಟ್ರಪತಿ' ಬೇಕಾದರೂ ಅಲ್ಲಿದ್ದಾರೆ !

Update: 2016-05-24 03:38 GMT

ಬೀಜಿಂಗ್, ಮೇ 24: ಚೀನಾದ ಸೆನ್ಸಾರ್ ವ್ಯವಸ್ಥೆಯನ್ನು ಸದ್ದಿಲ್ಲದೇ ಉಲ್ಲಂಘಿಸಿದ ವಂಚಕನೊಬ್ಬ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೆಸರಿನಲ್ಲಿ ಸಿನಾ ವೈಬೊ ಎಂಬ ಟ್ವಿಟ್ಟರ್ ಮಾದರಿಯ ಖಾತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ.

ವೈಬೊ ಸುಮಾರು 500 ದಶಲಕ್ಷ ಬಳಕೆದಾರರನ್ನು ಹೊಂದಿದೆ.

ಈ ಖಾತೆಯಲ್ಲಿ ಭಾರತದ ರಾಷ್ಟ್ರಪತಿ ಎಂದು ಗುರುತಿಸಿಕೊಳ್ಳಲಾಗಿದ್ದು, ಇದು ಒಂದು ವೃತ್ತದಲ್ಲಿರುವ ಭಾರತದ ನಕ್ಷೆಯನ್ನು ಪ್ರದರ್ಶಿಸುತ್ತದೆ. ಮುಖರ್ಜಿಯವರ ನಾಲ್ಕು ದಿನಗಳ ಭೇಟಿ ಹಿನ್ನೆಲೆಯಲ್ಲಿ ಹಲವು ಪೋಸ್ಟ್‌ಗಳನ್ನು ಈ ವಂಚಕ ತೇಲಿ ಬಿಟ್ಟಿದ್ದಾನೆ. ಶುಭಾಶಯ ಹೇಳುವ ಪೋಸ್ಟ್‌ನಿಂದ ಆರಂಭಿಸಿ, ಭಾರತವನ್ನು ತೀರಾ ಕೀಳುಮಟ್ಟದಲ್ಲಿ ಚಿತ್ರಿಸುವ ವರೆಗಿನ ಪೋಸ್ಟ್‌ಗಳನ್ನು ಮಾಡಲಾಗಿದೆ.

"ಹಲೋ ಚೀನಾ! ನಿಮ್ಮನ್ನು ಭೇಟಿ ಮಾಡುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಮೇ 4ರ ಪೋಸ್ಟ್ ಹೇಳುತ್ತದೆ. "ನೀವು ಏನು ಭಾವಿಸಿದ್ದೀರಿ? ನಮ್ಮ ದೇಶದಲ್ಲಿ ಅತಿದೊಡ್ಡ ಹರಿವು ಯಾವುದು?" ಎಂದು ಇನ್ನೊಂದು ಪೋಸ್ಟ್ ಪ್ರಶ್ನಿಸುತ್ತದೆ. "ನಮ್ಮ ದೇಶದಲ್ಲಿ ಚೀನಾಕ್ಕಿಂತ ಹಲವು ವಸ್ತುಗಳನ್ನು ಹೆಚ್ಚಾಗಿ ಹೊಂದಿದ್ದಾರೆ. ಆದರೆ ಈ ಬೆಳವಣಿಗೆ ಚೀನಾಗೆ ಒಳ್ಳೆಯದಲ್ಲ ಎನ್ನುವುದು ನನ್ನ ಭಾವನೆ" ಎಂದು ಮತ್ತೊಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ ಕಟ್ಟುನಿಟ್ಟಿನ ವೈಬೊ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಈ ವಂಚಕ ಹೇಗೆ ಭೇದಿಸಿದ್ದಾನೆ ಎನ್ನುವುದು ಕುತೂಹಲದ ವಿಚಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News