ಕೆನಡಾದಲ್ಲಿ ಭಾರತೀಯ ಪ್ರಜೆ ಹತ್ಯೆ ಪ್ರಕರಣ | ಶಂಕಿತನ ಬಂಧನ
Update: 2024-04-30 22:15 IST
Photo: X
ಟೊರಂಟೊ : ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದಲ್ಲಿ ಎಪ್ರಿಲ್ 23ರಂದು ನಡೆದಿದ್ದ ಭಾರತೀಯ ಪ್ರಜೆ ಕುಲ್ವಿಂದರ್ ಸಿಂಗ್ ಸೊಹಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಯುವಕನನ್ನು ಕೆನಡಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಎಪ್ರಿಲ್ 23ರಂದು ವೈಟ್ರಾಕ್ ನಗರದಲ್ಲಿ ಇಬ್ಬರು ಯುವಕರ ನಡುವೆ ಆರಂಭಗೊಂಡ ಮಾತಿನ ಚಕಮಕಿ ಒಬ್ಬನಿಗೆ ಚೂರಿ ಇರಿತದಲ್ಲಿ ಮುಕ್ತಾಯಗೊಂಡಿತ್ತು. ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಭಾರತ ಮೂಲದ ಕುಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿತ್ತು. ಒಂದು ವಾರದ ಕಾರ್ಯಾಚರಣೆಯ ಬಳಿಕ 28 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಮಾಹಿತಿ ನೀಡಿದ್ದಾರೆ.