ಖಡ್ಸೆಯ ಕರಾಚಿ ಕನೆಕ್ಷನ್‌ಗೆ ಮತ್ತೆ ಪುರಾವೆ!

Update: 2016-06-07 10:40 GMT

   ಮುಂಬೈ, ಜೂನ್ 7: ಮಹಾರಾಷ್ಟ್ರ ಸರಕಾರದ ಕ್ಯಾಬಿನೆಟ್ ಸಚಿವ ಏಕನಾಥ್ ಖಡ್ಸೆ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಲ್ಪಟ್ಟ ಬಳಿಕ ಕಳೆದ ವಾರ ರಾಜಿನಾಮೆ ನೀಡಿದ್ದರು. ಆದರೆ ಇವರ ವಿರುದ್ಧ ಭೂಗತ ದೊರೆ ದಾವೂದ್ ಇಬ್ರಾಹೀಂನೊಂದಿಗೆ ಸಂಬಂಧ ಇರಿಸಿದ ಆರೋಪವನ್ನೂ ಹೊರಿಸಲಾಗಿತ್ತು. ಈ ಆರೋಪಗಳನ್ನು ಸುಳ್ಳು ಎಂದು ಸಾಬೀತುಗೊಳಿಸಲಿಕ್ಕಾಗಿ ಅವರು ತನ್ನ ಹೆಚ್ಚು ಆಪ್ತ ವ್ಯಕ್ತಿಯನ್ನು ರಂಗಕ್ಕಿಳಿಸಿದ್ದಾರೆ. ಡಾ. ಗುರ್‌ಮುಖ್ ಜಗ್ವಾನಿ. ಬಳಿ ಈಗಲೂ ಕರಾಚಿಯಲ್ಲಿ ಸಣ್ಣ ಮನೆ ಇದೆ. ಅವರು ಮಹಾರಾಷ್ಟ್ರ ಬಂದು ನೆಲಸಿ ಬಿಜೆಪಿ ಎಂಎಲ್ಸಿ ಆಗುವ ಮೊದಲು ಅವರು ಅಲ್ಲಿಯೇ ವಾಸಿಸುತ್ತಿದ್ದರು. ತಂದೆಯ ಹೆಸರಿನಲ್ಲಿರುವ ಅವರ ಮನೆ ಕರಾಚಿಯ ಅದ್ದೂರಿ ಪ್ರದೇಶ ಕ್ಲಿಫ್ಟನ್‌ನ ಹತ್ತಿರದಲ್ಲಿದೆ.ಅಲ್ಲಿ ದಾವೂದ್ ಉಳಿದುಕೊಂಡಿದ್ದಾನೆ ಎನ್ನಲಾಗುತ್ತದೆ. ಜಗ್ವಾನಿ ಕಾಲ್ ರೆಕಾರ್ಡ್‌ನಲ್ಲಿ ದಾಖಲಾದ ಕ್ಲಿಫ್ಟನ್ ನ ವಿಳಾಸವನ್ನು ತಾಳೆಮಾಡಿನೋಡಲು ತನ್ನ ಸಂಪರ್ಕವನ್ನುಉಪಯೋಗಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಅವೆಲ್ಲವೂ ನಕಲಿ ಎಂದು ಸಾಬೀತಾಗಿವೆ. ಜಾಗ್ವಾನಿ ಹೇಳುವ ಪ್ರಕಾರ ಹ್ಯಾಕರ್‌ಗಳು ಪತ್ತೆ ಹಚ್ಚಿದ ಬಿಲ್‌ಗೂ ಪಾಕಿಸ್ತಾನದ ಟೆಲಿ ಕಮ್ಯೂನಿಕೇಶನ್ ಲಿಮಿಟೆಡ್‌ನ ಬಿಲ್‌ಗೂ ವ್ಯತ್ಯಾಸ ಇದೆ.

  ಪಾಕಿಸ್ತಾನಿ ವೈದ್ಯನಾಗಿ ಬಂದು ಮಹಾರಾಷ್ಟ್ರದಲ್ಲಿ ವ್ಯವಹಾರ ವಹಿವಾಟು ಮತ್ತು ಬಿಜೆಪಿ ರಾಜಕೀಯ ನಾಯಕರಾಗಿ ಜಾಗ್ವಾನಿ ಬೆಳೆದವರು. ಖಡ್ಸೆಯನ್ನು ಅರಿತಿರುವ ಪ್ರತಿಯೊಬ್ಬ ವ್ಯಕ್ತಿಯು ಜಾಗ್ವಾನಿ ಮತ್ತು ಖಡ್ಸೆಯ ಜೋಡಿಯನ್ನು ತಿಳಿದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕೂಡಾ ಜಾಗ್ವಾನಿ ಖಡ್ಸೆಯ ಹಿಂದೆ ಕುಳಿತುಕೊಳ್ಳುತ್ತಾರೆ. ಮತ್ತು ಯಾವಾಗಲೂ ಅವರಿಗೆ ನೆರವಾಗುತ್ತಿರುತ್ತಾರೆ. ಕಾಂಗ್ರೆಸ್ ನಾಯಕರೊಬ್ಬರು ಜಾಗ್ವಾನಿ ಖಡ್ಸೆಯ ಆತ್ಮೀಯ ಸಂಬಂಧ ಎಲ್ಲರಿಗೂ ಗೊತ್ತಿರುವಂತಹದೇ ಎಂದು ಹೇಳಿದ್ದಾರೆ. ಹೆಚ್ಚಿನವರಿಗೆ ಖಡ್ಸೆಯನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ಅವರು ಜಾಗ್ವಾನಿಯನ್ನು ಭೇಟಿಯಾಗುತ್ತಾರೆ"

 ಪಾಕಿಸ್ತಾನದ ಸಿಂಧ್‌ಪ್ರಾಂತದಲ್ಲಿ ಸುಕ್ಕೂರ್ ನಲ್ಲಿ ಜನಿಸಿದ ಜಾಗ್ವಾನಿ ಸಿಂಧ್ ಯುನಿವರ್ಸಿಟಿಯ ಚಂಡಕಾ ಮೆಡಿಕಲ್ ಕಾಲೇಜಿನಿಂದ ತನ್ನ ಡಿಗ್ರಿಯನ್ನು ಪಡೆದವರು. 1981ರಲ್ಲಿ ಅವರು ಹನಿಮೂನ್ ಪ್ರವಾಸಕ್ಕಾಗಿ ಭಾರತಕ್ಕೆ ಬಂದರು ಮತ್ತು ಜಲಗಾಂವ್‌ನ ಕೆಲವು ಸಂಬಂಧಿಕರೊಂದಿಗೆ ಉಳಿದುಕೊಂಡರು. ಆನಂತರ ಅವರು ಇಲ್ಲಿಯೇ ವಾಸಿಸುವುದಾಗಿ ನಿರ್ಧರಿಸಿದರು.

 "ನನಗೆ ಭಾರತದಲ್ಲಿ ವಾಸಿಸಲು ಇಷ್ಟ ಆಯಿತು. ಧರ್ಮದ ಲೆಕ್ಕದಲ್ಲಿಯೂ ನಾನು ಇಲ್ಲಿ ವಾಸಿಸುವುದು ಉತ್ತಮೆ ಎಂದೆನಿಸಿತು. ತಾನು ಒಂದು ವರ್ಷ ಪಾಕಿಸ್ತಾನದಲ್ಲಿ ಪೀಡಿಯಾ ಟ್ರಿಕ್ಸಿಯನ್ ಆಗಿ ಕೆಲಸ ಮಾಡಿದ್ದೇನೆ. 1985ರಲ್ಲಿ ನಾನು ಮುಂಬೈಗೆ ಬಂದೆ. 1987ರಲ್ಲಿ ತಾನು ತನ್ನ ಸಂಬಂಧಿಕರ ಬಳಿಗೆ ಜಲಗಾಂವ್‌ಗೆ ಬಂದೆ" ಎಂದು ಜಾಗ್ವಾನಿ ಹೇಳಿದ್ದಾರೆ.

ಜಲಗಾಂವ್ ಬಂದ ಬಳಿಕ ಜಾಗ್ವಾನಿಯ ಮಹಾರಾಷ್ಟ್ರ ಬಲಶಾಲಿ ರಾಜಕಾರಣಿಯ ಭೇಟಿ ಅವರಿಗಾಯಿತು. ಜಾಗ್ವಾನಿಯ ಪ್ರಕಾರ" ಅವರು ಬಹಳ ಬೇಗನೆ ಬಿಜೆಪಿಯ ಭಾಗವಾದರು.ಜಲಗಾಂವ್‌ಗೆ ಬರುವ ಎಲ್ಲ ಹಿರಿಯ ನಾಯಕರ ಸೇವೆಮಾಡುವ ಭಾಗ್ಯ ತನ್ನ ಪಾಲಾಯಿತು. ನಾನು ಎಲ್‌ಕೆ ಅಡ್ವಾಣಿಜಿಯವರನ್ನು ಕಾರಿನಲ್ಲಿ ಇಡೀ ನಗರ ಸುತ್ತಾಡಿಸಿರುವೆ" ಎಂದು ಅವರು ಹೇಳಿದ್ದಾರೆ. ಖಡ್ಸೆಯನ್ನು ತನ್ನ ಬಾಸ್ ಎನ್ನುವ ಜಾಗ್ವಾನಿಯ ಆಸ್ತಿ ಎಷ್ಟು ಗೊತ್ತೇ?. 2014ರ ಚುನಾವಣೆಯ ಅಫಿದಾವಿತ್‌ನ ಪ್ರಕಾರ 18.11ಕೋಟಿ ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News