ಮುಸ್ಲಿಂ ಸಹೋದ್ಯೋಗಿಗಳ ಜೊತೆ ಇಫ್ತಾರ್ ಮಾಡಿದ ಕೆನಡಾ ಪ್ರಧಾನಿ

Update: 2016-06-09 03:40 GMT

ಕೆನಡಾ, ಜೂ.9: ಕೆನಡಾ ಪ್ರಧಾನಿ ಜಸ್ಟಿನ್ ತ್ರುಡೇವ್ ಅವರು, ಮುಸ್ಲಿಂ ಸಹೋದ್ಯೋಗಿಗಳ ಜತೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ವೀಡಿಯೊವನ್ನು ಪ್ರಧಾನಿ ಸ್ವತಃ ಷೇರ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಸ್‌ನಂತೆ ಹಬ್ಬಿದೆ.

ಫೇಸ್‌ಬುಕ್‌ನಲ್ಲಿ ಇದನ್ನು ಅಪ್‌ಲೋಡ್ ಮಾಡಿದ ತಕ್ಷಣ ಸುಮಾರು 40 ಲಕ್ಷ ಮಂದಿ ಇದನ್ನು ಷೇರ್ ಮಾಡಿರುವುದು ಕುತೂಹಲಕಾರಿಯಾಗಿದೆ.

ತ್ರುಡೇವ್ ಅವರು ಇಫ್ತಾರ್ ಕೂಟದಲ್ಲಿ ಮಧ್ಯಪ್ರಾಚ್ಯ ಹಾಗೂ ಏಷ್ಯನ್ ಖಾದ್ಯಗಳಾದ ಹಮ್ಮಸ್, ಸ್ಟಪ್ಟ್ ವೈನ್ ಲೀವ್ಸ್ ಹಾಗೂ ಖರ್ಜೂರವನ್ನು ಸವಿಯುತ್ತಿರುವ ದೃಶ್ಯಾವಳಿ ಇದರಲ್ಲಿದೆ.

ಕೆನಡಾ ಪ್ರಧಾನಿ ಇತ್ತೀಚೆಗೆ ಮಸೀದಿಯೊಂದಕ್ಕೆ ಭೇಟಿ ನೀಡಿದ ವೀಡಿಯೊ ದಾಖಲಿಸಿದ ಬಳಿಕ, ಮುಸ್ಲಿಂ ಸಮುದಾಯದ ಜೊತೆ ನಿಕಟ ನಂಟು ಹೊಂದಿದ್ದಾರೆ, ಪ್ರಧಾನಿಯಾಗಿ ಆಯ್ಕೆಯಾಗುವ ಎರಡು ವರ್ಷ ಮುನ್ನ ಅಂದರೆ 2013ರಲ್ಲಿ ಅವರು ಮಸೀದಿಗಳಲ್ಲಿ ಮುಸ್ಲಿಂ ಬಾಂಧವರ ಜೊತೆ ಸಂಜೆಯ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿದ್ದುದನ್ನು ವೀಡಿಯೊ ಚಿತ್ರೀಕರಿಸಲಾಗಿತ್ತು.

ಜನರ ನೈಜ ನಾಯಕ ಹೇಗಿರುತ್ತಾನೆ ಎಂದು ಜಗತ್ತಿಗೆ ತೋರಿಸಿದ್ದಕ್ಕೆ ಧನ್ಯವಾದಗಳು. ಸಿಯೆಟಲ್ ಪ್ರದೇಶವನ್ನು ಪ್ರತ್ಯೇಕಿಸುವುದಿಲ್ಲ ಎಂದು ಖಚಿತಪಡಿಸುತ್ತೀರಾ? ಎಂದು ಇದಕ್ಕೆ ಪ್ರತಿಕ್ರಿಯೆಯೊಂದು ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News