ಗಾಝಾ ಯುದ್ಧ ವರದಿಗಾರಿಕೆಗೆ ಪುಲಿಟ್ಝರ್‌ ಪ್ರಶಸ್ತಿ ಪಡೆದ ʼದಿ ನ್ಯೂಯಾರ್ಕ್‌ ಟೈಮ್ಸ್‌ʼ, ‌ʼರಾಯ್ಟರ್ಸ್ʼ

Update: 2024-05-07 11:39 GMT

ಸಾಂದರ್ಭಿಕ ಚಿತ್ರ | PC : NDTV

 

ನ್ಯೂಯಾರ್ಕ್‌: ಇಸ್ರೇಲ್‌ ಮೇಲಿನ ಹಮಾಸ್‌ ದಾಳಿ ಹಾಗೂ ಗಾಝಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಯುದ್ಧದ ಘೋರ ಪರಿಣಾಮಗಳತ್ತ ಬೆಳಕು ಚೆಲ್ಲುವ ವರದಿಗಾರಿಕೆಗಾಗಿ ʼದಿ ನ್ಯೂಯಾರ್ಕ್‌ ಟೈಮ್ಸ್‌ʼ ಮತ್ತು ʼರಾಯ್ಟರ್ಸ್ʼ ಪ್ರತಿಷ್ಠಿತ ಪುಲಿಟ್ಝರ್‌ ಪ್ರಶಸ್ತಿ ಪಡೆದಿವೆ.

ಅಕ್ಟೋಬರ್‌ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್‌ ನಡೆಸಿದ ದಾಳಿ ಹಾಗೂ ಇಸ್ರೇಲ್‌ ಇದಕ್ಕೆ ಪ್ರತೀಕಾರವಾಗಿ ನಡೆಸಿದ ದಾಳಿಗಳ ವರದಿಗಾರಿಕೆಗಾಗಿ ದಿ ನ್ಯೂಯಾರ್ಕ್‌ ಟೈಮ್ಸ್‌ ಈ ಪ್ರಶಸ್ತಿ ಗಳಿಸಿದೆ. ಇದೇ ವಿಷಯ ಕುರಿತಾದ ಬ್ರೇಕಿಂಗ್‌ ನ್ಯೂಸ್‌ ಫೋಟೋಗ್ರಾಫಿಗಾಗಿ ʼರಾಯ್ಟರ್ಸ್ʼ ಸಂಸ್ಥೆ ಪುಲಿಟ್ಝರ್‌ ಪ್ರಶಸ್ತಿ ಪಡೆದಿದೆ.

ಫೆಲೆಸ್ತೀನಿ ಪರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ ಕಾಲೇಜಿನ ಬದಲು ಕೊಲಂಬಿಯಾ ವಿವಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಲಸಿಗ ಬಾಲ ಕಾರ್ಮಿಕರು, ಕಾನೂನು ವ್ಯವಸ್ಥೆಯಲ್ಲಿ ಜನಾಂಗೀಯ ತಾರತಮ್ಯಗಳು ಮತ್ತು ಬಂದೂಕು ಹಿಂಸೆಯ ಕುರಿತು ವರದಿಗಾಗಿಕೆಗಾಗಿಯೂ ಹಲವು ಅಮೆರಿಕಾದ ಪತ್ರಕರ್ತರು ಈ ಪ್ರಶಸ್ತಿ ಪಡೆದಿದ್ದಾರೆ.

ಫಿಕ್ಷನ್‌ ಪ್ರಶಸ್ತಿಯನ್ನು ಲೇಖಕಿ ಜೇನ್‌ ಆನ್ನೆ ಫಿಲಿಪ್ಸ್‌ ಅವರ “ನೈಟ್‌ ವಾಚ್‌”ಗೆ ದೊರೆತರೆ, ನಾನ್‌-ಫಿಕ್ಷನ್‌ ಪ್ರಶಸ್ತಿಯು ನಥಾನ್‌ ಥ್ರಾಲ್‌ ಅವರ “ಎ ಡೇ ಇನ್‌ ದಿ ಲೈಫ್‌ ಆಫ್‌ ಅಬೆದ್‌ ಸಲಾಮ:ಅನಾಟಮಿ ಆಫ್‌ ಎ ಜೆರುಸಲೆಂ ಟ್ರಾಜೆಡಿ” ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News