ಜಗತ್ತಿನಲ್ಲಿ 17 ಕೋಟಿ ಮಕ್ಕಳು ಬಾಲಕಾರ್ಮಿಕರು !

Update: 2016-06-13 06:40 GMT

ವಾಷಿಂಗ್ಟನ್, ಜೂನ್ 13: ಜಗತ್ತಿನಾದ್ಯಂತ ಹದಿನೇಳು ಕೋಟಿಯಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ನಿರ್ಮಾಣ ಕ್ಷೇತ್ರದಲ್ಲಿ ಹೆಚ್ಚು ಮಂದಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಎರಡು ಕೋಟಿಯಷ್ಟು ಮಕ್ಕಳನ್ನು ನಿರ್ಬಂಧಿಸಿ ಕೆಲಸ ಮಾಡಿಸಲಾಗುತ್ತಿದೆ. ಎಂದು ವರದಿ ತಿಳಿಸಿದೆ.

ಸಂಘಟನೆ ಬಹಿರಂಗಪಡಿಸಿದ ಲೆಕ್ಕಗಳು ಬಹಳ ಗಂಭೀರವಾಗಿದ್ದು . ಜಗತ್ತಿನಾದ್ಯಂತ ಹದಿನಾರು ಕೋಟಿ ಎಂಬತ್ತು ಲಕ್ಷ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಕ್ಕಳು 58ದೇಶಗಳಲ್ಲಿ 122 ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕೃಷಿ, ನಿರ್ಮಾಣ ಕ್ಷೇತ್ರಗಳಲ್ಲಿ ಮಕ್ಕಳನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ.

ಅದೇವೇಳೆ ಬಂಗಾರದ ಕೆಲಸ, ರತ್ನದ ಉದ್ದಿಮೆ, ಕಲ್ಲಿದ್ದಲ ಗಣಿ ಮುಂತಾದ ಅಪಾಯಕಾರಿ ಕ್ಷೇತ್ರಗಳಲ್ಲಿಯೂ ಮಕ್ಕಳನ್ನು ದುಡಿಸಲಾಗುತ್ತಿದೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಕಟ್ಟಡ ನಿರ್ಮಾಣದ ಮೊದಲ ಹಂತಗಳಲ್ಲಿ ಮಕ್ಕಳನ್ನು ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News