ತೀರ್ಪು ಸ್ವೀಕರಿಸಲು ಐರೋಪ್ಯ ಒಕ್ಕೂಟ ಸಲಹೆ

Update: 2016-07-12 18:41 GMT

ಬೀಜಿಂಗ್, ಜು. 12: ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯ ತೀರ್ಪನ್ನು ಒಪ್ಪುವಂತೆ ಹಾಗೂ ಆ ಮೂಲಕ ಅಂತಾರಾಷ್ಟ್ರೀಯ ವ್ಯವಸ್ಥೆಯೊಂದನ್ನು ಗೌರವಿಸುವಂತೆ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಮಂಗಳವಾರ ಚೀನಾಕ್ಕೆ ಕರೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐರೋಪ್ಯ ಒಕ್ಕೂಟ-ಚೀನಾ ಶೃಂಗಸಭೆಯ ನೇಪಥ್ಯದಲ್ಲಿ ಮಾತನಾಡಿದ ಟಸ್ಕ್, ‘‘ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ’’ಯನ್ನು ರಕ್ಷಿಸುವಂತೆ ಚೀನಾಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News