ಶ್ವೇತಭವನದ ಗೇಟ್‍ಗೆ ಅಪ್ಪಳಿಸಿದ ಕಾರು; ಚಾಲಕ ಸಾವು
Update: 2024-05-05 22:47 IST
Photo : telegraphindia
ವಾಷಿಂಗ್ಟನ್, ಮೇ 5: ಶ್ವೇತಭವನದ ಗೇಟ್‍ಗೆ ವಾಹನವೊಂದು ಅಪ್ಪಳಿಸಿ ಅದರ ಚಾಲಕ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಶ್ವೇತಭವನದ ಸಂಕೀರ್ಣ(ಕಾಂಪ್ಲೆಕ್ಸ್)ನ ಹೊರ ಆವರಣದ ಗೇಟಿಗೆ ವಾಹನ ಅಪ್ಪಳಿಸಿದೆ. ಇದು ಉದ್ದೇಶಪೂರ್ವಕ ಕೃತ್ಯವಾಗಿರುವ ಸಾಧ್ಯತೆಯಿಲ್ಲ. ವಾಹನದ ಚಾಲಕ ಮೃತಪಟ್ಟಿದ್ದು ಆತನ ಗುರುತು ಪತ್ತೆಯಾಗಿಲ್ಲ. ಶ್ವೇತಭವನದ ರಹಸ್ಯ ಸೇವಾ ವಿಭಾಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ ಎಂದು ವಾಷಿಂಗ್ಟನ್ ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆ ಹೇಳಿದೆ.