ಪ್ರಧಾನಿ ಮೋದಿಯವರೇ, ನಿಮ್ಮ ಮೊಬೈಲ್ ನಂಬರ್ ಕೊಡ್ತೀರಾ ?!

Update: 2016-07-19 10:39 GMT

ಹೊಸದಿಲ್ಲಿ, ಜು.19: ‘‘ಪ್ರಧಾನಿ ನರೇಂದ್ರ ಮೋದಿ ರಾಜಕೀಯಕ್ಕೆ ಬರುವ ಮೊದಲು ರಾಮಲೀಲಾ ತಂಡದಲ್ಲಿ ಕೆಲಸ ಮಾಡಿದ್ದರೇ ? ಹೌದೆಂದಾದರೆ ಅವರು ಯಾವ ಪಾತ್ರ ಮಾಡಿದ್ದರು ?’’ ಈ ಸ್ವಾರಸ್ಯಕರ ಪ್ರಶ್ನೆಯನ್ನು ಆರ್‌ಟಿಐ ಮೂಲಕ ಕೇಳಲಾಗಿದ್ದರೆ, ಪ್ರಧಾನಿ ಕಾರ್ಯಾಲಯ ಅದಕ್ಕೆ ನೀಡಿದ ಉತ್ತರ ‘‘ಕೇಳಿರುವ ಮಾಹಿತಿ ನಮ್ಮ ದಾಖಲೆಯ ಭಾಗವಾಗಿಲ್ಲ.’’

ಇದು ಮಾಹಿತಿ ಹಕ್ಕು ಕಾಯ್ದೆಯನ್ವಯ ಹಲವಾರು ಮಂದಿ ಪ್ರಧಾನಿ ಕಾರ್ಯಾಲಯಕ್ಕೆ ಪ್ರಶ್ನೆಗಳನ್ನು ಕೇಳಿ ಸಲ್ಲಿಸಿರುವ ಅರ್ಜಿಗಳ ಸಣ್ಣ ಸ್ಯಾಂಪಲ್ ಅಷ್ಟೇ.
 ಇನ್ನೊಬ್ಬ ಅರ್ಜಿದಾರ ಪ್ರಧಾನಿಯ ನಿವಾಸದ ಅಡುಗೆ ಮನೆಯಲ್ಲಿ ಯಾವ ವಿಧದ ಹಾಗೂ ಎಷ್ಟು ಸಿಲಿಂಡರ್ ಗಳನ್ನು ಅಕ್ಟೋಬರ್ 2014 ಹಾಗೂ ಮೇ 2015 ರ ನಡುವೆ ಉಪಯೋಗಿಸಲಾಗಿದೆಯೆಂದು ಕೇಳಿದ್ದ. ಜೊತೆಗೆ ಸಿಲಿಂಡರ್ ಬಿಲ್‌ಗಳ ಬಗ್ಗೆ ಹಾಗೂ ಮೇ 2015ರಲ್ಲಿ ಖರೀದಿಸಲಾದ ಸಾಂಬಾರು ಪದಾರ್ಥಗಳ ಬಿಲ್ಲುಗಳನ್ನೂ ಕೇಳಿದ್ದರು. ಇದಕ್ಕೆ ಪ್ರಧಾನಿ ಕಾರ್ಯಾಲಯ ನೀಡಿದ ಉತ್ತರ ‘‘ಪ್ರಧಾನಿ ನಿವಾಸದ ಅಡುಗೆ ಮನೆ ಲೆಕ್ಕಾಚಾರ ಖಾಸಗಿಯಾಗಿದ್ದು, ಅದಕ್ಕೆ ಸರಕಾರಿ ಖಾತೆಯಿಂದ ಹಣ ಸಂದಾಯವಾಗುತ್ತಿಲ್ಲ.’’

ಇಂತಹ ಹತ್ತು ಹಲವು ಪ್ರಶ್ನೆಗಳು ಹಾಗೂ ಅವುಗಳಿಗೆ ನೀಡಿರುವ ಉತ್ತರಗಳನ್ನು ಪ್ರಧಾನಿ ಕಾರ್ಯಾಲಯ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.
ಒಬ್ಬರಂತೂ ಪ್ರಧಾನಿಯ ಮೊಬೈಲ್ ಸಂಖ್ಯೆ ಕೇಳಿದ್ದರೆ ಇನ್ನೊಬ್ಬರು ಪ್ರಧಾನಿ ಯಾವತ್ತಾದರೂ ರಜೆ ತೆಗೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಎಸೆದಿದ್ದಾರೆ.
ಪ್ರಧಾನಿ ಕಾರ್ಯಾಲಯದ ಸಿಬ್ಬಂದಿಯನ್ನೂ ಆರ್‌ಟಿಐ ಅರ್ಜಿದಾರರು ಬಿಟ್ಟಿಲ್ಲ. ಪ್ರಧಾನಿಯ ಮುಖ್ಯ ಕಾರ್ಯದರ್ಶಿ ಯಾವತ್ತಾದರೂ ತಮ್ಮ ಸಹೋದ್ಯೋಗಿಗಳನ್ನು ಪಿಕ್ನಿಕ್‌ಗೆ ಕರೆದುಕೊಂಡು ಹೋಗಿದ್ದಾರೆಯೇ ಎಂದು ಒಬ್ಬರು ಪ್ರಶ್ನೆ ಕೇಳಿದ್ದರು.

ಪ್ರಧಾನಿ ಹಾಗೂ ಅವರ ಕಚೇರಿಯ ಬಗ್ಗೆ ಇಂತಹ ಹಲವಾರು ಕುತೂಹಲಕಾರಿ ಆರ್‌ಟಿಐ ಪ್ರಶ್ನೆಗಳು ಹಾಗೂ ಅವುಗಳ ಉತ್ತರ ಇಲ್ಲಿವೆ ಓದಿ.

Q: Records and documents which show that the Prime Minister of India, Narendra Modi, is the Prime Servant of India and not the Prime Minister.
A: “There is no proposal to change the official designation of PM.”

Q: Has the Prime Minister read the Indian constitution? Is the Prime Minister supposed to read the Indian constitution? Is the Prime Minister assumed to have read Indian constitution? Has anyone in the PMO till date told the Prime Minister what his duties are towards India?
A: “Information sought does not fall under the definition of information.”

Q: Who helps the Prime Minister in sending tweets in regional and foreign languages? Names of individual(s) for each regional language.
A: “Information sought is not maintained on record.” (Another reply says that the “Prime Minister himself is managing his personal social media accounts.”)

Q: Number of sick or casual or health leave availed by the Prime Minister in the last 10 years.
A: “No leave has been availed by the present Prime Minister since taking over the office.” (Replying to a related query on whether Prime Minister Modi was on leave during the Bihar election campaign last year, the PMO responded: “Tours on election campaign are not official.”)

Q: Percentage of marks Modi secured while graduating in 1977 from Delhi University.
A: “Does not form part of records.”

Q: Can one get the mobile number of the PM under RTI?
A: “The PMO has not given any mobile phone to Prime Minister.”

Q: Legal status of announcements made by the Prime Minister.
A: “Once the announcement is made, the ministries concerned are entrusted with the responsibility of implementing the announcements and monitoring their implementation.”

Q: Does the PMO communicate, send letters, etc., in the official language Hindi?
A: “Letters in Hindi received from Union Ministers, Governors, Chief Ministers, etc., are replied to in Hindi… Hindi letters from public are also replied in Hindi.”

Q: Roza iftar parties Prime Minister Modi attended in 2014 and 2015.
A: “None.”

And finally this:
Q: Has the Principal Secretary to the PM, Nripendra Misra, ever taken his colleagues in the PMO on a picnic? If yes, who all went, how much money was spent, were family members also invited on such excursion, and what was the food menu? Was the food ordered from an external caterer? Was the venue fixed by general consensus or was it decided solely by Misra?
A: “No picnic/excursion was ever organised by Nripendra Misra.”

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News