ಲಿಬಿಯದಲ್ಲಿ ಅಮೆರಿಕದಿಂದ ವಾಯು ದಾಳಿ

Update: 2016-08-03 05:47 GMT

ಟ್ರಪೊಲಿ,ಆ.3: ಲಿಬಿಯದ ಐಸಿಸ್ ಕೇಂದ್ರವಾದ ಸಿರ್ತ್‌ನಲ್ಲಿ ಅಮೆರಿಕದ ವ್ಯೋಮ ಸೇನೆ ವಾಯುದಾಳಿ ನಡೆಸಿದ್ದು ಇದೇ ಮೊದಲಬಾರಿಗೆ ಲಿಬಿಯದಲ್ಲಿ ಅಮೆರಿಕ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ. ಆಕಾಶದಾಳಿಯಲ್ಲಿ ಐಸಿಸ್‌ಗೆ ಭಾರೀ ನಾಶನಷ್ಟ ಸಂಭವಿಸಿದೆ ಎಂದು ಲಿಬಿಯದ ಮೈತ್ರಿಸರಕಾರದ ಪ್ರಧಾನಿ ಫಾಯಿಸ್ ಅಲ್‌ಸರ್ರಾಜ್ ಟಿವಿಯ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.

   ಲಿಬಿಯ ಸರಕಾರ ದಾಳಿ ನಡೆಸುವಂತೆ ಅಮೆರಿಕವನ್ನು ಆಗ್ರಹಿಸಿತ್ತು. ಆದ್ದರಿಂದ ವ್ಯೋಮಸೇನಾ ದಾಳಿ ನಡೆಸಲಾಗಿದೆ ಎಂದು ಪೆಂಟಗಾನ್ ಮೂಲಗಳು ಹೇಳಿಕೊಂಡಿವೆ. ಸಿರ್ತ್‌ನಲ್ಲಿ ಐಸಿಸ್ ಪ್ರಬಲ ಪ್ರತಿರೋಧ ವಲಯವನ್ನು ಸ್ಥಾಪಿಸಿ ಲಿಬಿಯದ ಮೈತ್ರಿ ಸರಕಾರ ಭಾರಿ ತಲೆನೋವು ಒಡ್ಡಿತ್ತು. ಸಿರ್ತ್‌ಗೆ ಲಿಬಿಯ ಸೇನೆ ಪ್ರವೇಶಿಸುವಂತಾಗಲು ದಾರಿ ಮಾಡಿಕೊಡುವ ಉದ್ದೇಶದಿಂದ ವ್ಯೋಮಸೇನೆ ದಾಳಿ ನಡೆಸಿದೆ ಎಂದು ಪೆಂಟಗಾನ್ ಮೂಲಗಳು ಸ್ಪಷ್ಟಪಡಿಸಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News