ಬೀಫ್ ಮಾರುತ್ತಿದ್ದ ರಾಜ್ ಠಾಕ್ರೆ ಪಕ್ಷದ ಸದಸ್ಯನ ಬಂಧನ

Update: 2016-08-31 05:03 GMT
ಸಾಂದರ್ಭಿಕ ಚಿತ್ರ

ಮುಂಬೈ, ಆ.31: ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಳೆದ ಶನಿವಾರ ಬಂಧಿಸಲ್ಪಟ್ಟಿದ್ದ್ದ ಐದು ಮಂದಿಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಸ್ಥಳೀಯ ಸದಸ್ಯನೊಬ್ಬನೂ ಸೇರಿದ್ದಾನೆಂದು ಅಂಬೆರ್ ನಾಥ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಯೂಸುಫ್ ಶೇಖ್ ಈ ಗೋಮಾಂಸ ಮಾರಾಟ ಜಾಲದ ಪ್ರಮುಖ ಸೂತ್ರಧಾರನಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಇತರ ನಾಲ್ಕು ಮಂದಿ- ರಿಯಾಝ್ ಶೇಖ್, ಶಾಖಿಲ್ ಖುರೇಶಿ, ಆಝಾದ್ ಖುರೇಶಿ ಹಾಗೂ ಸಜ್ಜಾದ್  ಖುರೇಶಿ. ಇವರು ಯೂಸುಫ್ ಶೇಖ್ ಒಡೆತನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆರೋಪಿಗಳು ಅಂಬೆರ್ ನಾಥ್ ಪ್ರದೇಶದಿಂದ ಕಳೆದೊಂದು ವರ್ಷದಿಂದ ವರದಿಯಾಗಿರುವ ದನ ಹಾಗೂ ಎತ್ತು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ.
ಯೂಸುಫ್ ಶೇಖ್ ಅಂಗಡಿಯಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆಯೆಂದು ಯಾರೋ ನೀಡಿದ ಮಾಹಿತಿಯನ್ವಯ ಕಳೆದ ಶನಿವಾರ ಪೊಲೀಸರು ಆತನ ತಾತ್ಕಾಲಿಕ ತಗಡು ಶೀಟಿನ ಅಂಗಡಿಗೆ ಬೆಳಿಗ್ಗೆ ಸುಮಾರು 6 ಗಂಟೆಗೆ ದಾಳಿ ನಡೆಸಿದ್ದು ನಾಲ್ಕು ಮಂದಿಯನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಯೂಸುಫ್ ಶೇಖ್ನನ್ನು ಬೇರೊಂದು ಕಡೆಯಿಂದ ಬಂಧಿಸಲಾಗಿತ್ತು . ಒಂದು ದನ ಹಾಗೂ ಆರು ತಿಂಗಳು ಪ್ರಾಯದ ಕರುವೊಂದನ್ನು ಪೊಲೀಸರು ಆ ಸಂದರ್ಭ ವಶಪಡಿಸಿಕೊಂಡಿದ್ದರಲ್ಲದೆ ಅಂಗಡಿಯಲ್ಲಿದ್ದ ಗೋಮಾಂಸವನ್ನು ವಶಪಡಿಸಿ ಪರೀಕ್ಷಾಲಯಕ್ಕೆ ಕಳುಹಿಸಿದ್ದರು. ಆರೋಪಿಗಳು ಅಂಬರೆನಾಥ್ ಹಾಗೂ ಉಲ್ಲಾಸ್ ನಗರ ಮಾರುಕಟ್ಟೆಗಳಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News