ಕಾರ್ಮಿಕನನ್ನು ರಕ್ಷಿಸಲು ಹೋದ ಮಾಲಕನ ಮೃತ್ಯು

Update: 2016-09-03 07:35 GMT

ಕೊಲಂಚೇರಿ,ಸೆ.3: ಸಿಮೆಂಟ್ ಇಂಟರ್‌ಲಾಕ್ ಟೈಲ್ಸ್ ನಿರ್ಮಾಣ ಕಾರ್ಖಾನೆಯ ಕಾಂಕ್ರಿಟ್ ಮಿಕ್ಸರ್ ಮೆಶಿನ್ ಶುಚಿಗೊಳಿಸುವ ನಡುವೆ ಅವಗಡ ಸಂಭವಿಸಿದಾಗ ಕಾರ್ಮಿಕನನ್ನು ರಕ್ಷಿಸಲು ಧಾವಿಸಿದ ಕಾರ್ಖಾನೆಯ ಮಾಲಕ ಮೃತನಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.

 ಪುತ್ತನಕುರಿಶ್ ಪೊಲೀಸ್ ಠಾಣೆ ಸಮೀಪದ ಸುಪ್ರೀಂ ಇಂಟರ್‌ಲಾಕ್ ಕಾರ್ಖಾನೆಯ ಮಾಲಕ ಪಿರಮಾಡಂ ಸೈಮನ್ ಎಂಬವರು ಮೃತವ್ಯಕ್ತಿಯಾಗಿದ್ದು,

 ಅವಗಡದಲ್ಲಿ ಹೊರರಾಜ್ಯದ ಕಾರ್ಮಿಕರಾದ ಸುಜಿತ್(24),ದೀಪಕ್(23) ಎಂಬಿಬ್ಬರಿಗೆ ಗಾಯಗಳಾಗಿವೆ. ಗುರುವಾರ ಸಂಜೆ ಐದೂಮೂವತ್ತಕ್ಕೆ ಕೆಲಸ ನಿಲ್ಲಿಸಿದ ಮೇಲೆ ಕಾಂಕ್ರಿಟ್ ಮಿಕ್ಸರ್‌ಮೆಶಿನ್‌ನನ್ನು ಸುಜಿತ್ ಮತ್ತು ದೀಪಕ್ ಶುಚಿಗೊಳಿಸುತ್ತಿದ್ದರು. ಈ ವೇಳೆ ಹಠಾತ್ತನೆ ಮೆಶಿನ್ ಚಾಲೂ ಆಗಿತ್ತು. ಮೆಶಿನ್‌ನೊಳಗೆ ಸಿಕ್ಕಿಹಾಕಿಕೊಂಡ ಸುಜಿತ್‌ನನ್ನು ರಕ್ಷಿಸಲು ಪ್ರಯತ್ನಿಸುವ ವೇಳೆ ಸೈಮನ್ ಸ್ವಯಂ ಮೆಶಿನ್‌ನೊಳಗೆ ಬಿದ್ದರು. ಅವರನ್ನು ಮೆಶಿನ್ ಶುಚಿಕರಿಸುತ್ತಿದ್ದ ದೀಪಕ್ ಹೊರ ತೆಗೆಯಲು ಪ್ರಯತ್ನಿಸಿದ್ದರು ಆತನಿಂದ ಸಾಧ್ಯವಾಗಲಿಲ್ಲ.

   ನಂತರ ಇವರ ಬೊಬ್ಬೆ ಕೇಳಿ ಓಡಿ ಬಂದ ಇತರ ಕಾರ್ಮಿಕರು ಮತ್ತು ಊರವರು ಸೈಮನ್ ಮತ್ತು ದೀಪಕ್‌ರನ್ನು ಮೆಶಿನ್‌ನಿಂದ ಹೊರಗೆ ತೆಗೆದು ಕೋಲಂಚೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಸೈಮನ್ ಆಸ್ಪತ್ರೆಯಲ್ಲಿ ಮೃತರಾದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News