ಸ್ವ-ವಿನಾಶದ ಕೃತ್ಯ: ದಕ್ಷಿಣ ಕೊರಿಯ ಅಧ್ಯಕ್ಷೆ

Update: 2016-09-09 18:25 GMT

ಸಿಯೋಲ್, ಸೆ. 9: ಉತ್ತರ ಕೊರಿಯ ನಡೆಸಿರುವ ಹೊಸ ಪರಮಾಣು ಪರೀಕ್ಷೆಯು ಅದರ ‘ಸ್ವ-ವಿನಾಶದ’ ಕೃತ್ಯವಾಗಿದೆ ಹಾಗೂ ಇದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆ ದೇಶವನ್ನು ಮತ್ತಷ್ಟು ಏಕಾಂಗಿಯಾಗಿಸುತ್ತದೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಶುಕ್ರವಾರ ಹೇಳಿದ್ದಾರೆ.

ಬಡ, ಆದರೆ ಪರಮಾಣು ಶಕ್ತ ಉತ್ತರ ಕೊರಿಯ ನಡೆಸಿರುವ ಐದನೆ ಪರಮಾಣು ಪರೀಕ್ಷೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ‘‘ಗಂಭೀರ ಸವಾಲಾಗಿದೆ’’ ಎಂದು ಅವರು ಬಣ್ಣಿಸಿದರು.

‘‘ಈ ಪರಮಾಣು ಪರೀಕ್ಷೆಯ ಮೂಲಕ ಕಿಮ್ ಜಾಂಗ್-ಉನ್ ಆಡಳಿತವು ಮತ್ತಷ್ಟು ದಿಗ್ಬಂಧನಗಳು ಹಾಗೂ ಪ್ರತ್ಯೇಕತೆಯನ್ನು ಆಹ್ವಾನಿಸಿಕೊಂಡಿದೆ. ಇಂಥ ಪ್ರಚೋದನೆಯು ಅದರ ಸ್ವ-ವಿನಾಶದ ಗತಿಯನ್ನು ಇನ್ನಷ್ಟು ತ್ವರಿತಗೊಳಿಸಿದೆ’’ ಎಂದು ದಕ್ಷಿಣ ಕೊರಿಯದ ಅಧ್ಯಕ್ಷೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News