ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಚಿಂತನೆ: ಸಚಿವ ತನ್ವೀರ್

Update: 2016-09-25 18:47 GMT

ತೀರ್ಥಹಳ್ಳಿ,ಸೆ.25: ರಾಜ್ಯಾದ್ಯಂತ ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ರಾಜ್ಯದಲ್ಲಿ 4,164 ಶಾಲೆಗಳು ಮುಚ್ಚುವ ಹಂತದಲ್ಲಿದ್ದರೂ ಸರಕಾರಿ ಶಾಲೆಯ ಬಗ್ಗೆ ಸರಕಾರ ಹೆಚ್ಚು ಒತ್ತು ಕೊಡಲಿದೆ. ಸರಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡದಂತೆ ಮುಂದಿನ 5 ವರ್ಷ ನಿರ್ಬಂಧ ಹೇರುವ ನಿಟ್ಟಿನಲ್ಲಿ ಯೋಚನೆ ನಡೆಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಮ್ ಒಕ್ಕೂಟ ಆಯೋಜಿಸಿದ್ದ ವಾರ್ಷಿಕ ಸಮ್ಮಿಲನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳು ಬಡವರಿಗೆ, ಖಾಸಗಿ ಶಾಲೆಗಳು ಶ್ರೀಮಂತರಿಗೆ ಎಂಬ ವರ್ಗಿಕರಣ ನಮ್ಮಲ್ಲಿ ಸೇರಿಕೊಂಡಿದೆ. ಸರ್ವರಿಗೂ ಸಮಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಶಿಕ್ಷಣ ಇಲಾಖೆಯ ಮುಖಾಂತರ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಶಿಕ್ಷಣದಲ್ಲಿ ವೌಲ್ಯಾಧಾರಿತ ಶಿಕ್ಷಣ ನೀಡುವತ್ತ ನಾವು ಗುರಿ ಹೊಂದಿದ್ದೇವೆ. ಸರಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಕಡಿಮೆಯೇ ಕಾರಣವಲ್ಲ. ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ವೌಲ್ಯಾಧಾರಿತ ಶಿಕ್ಷಣ ಹೇಳಿಕೊಡುವುದರಲ್ಲಿ ವಿಲರಾಗಿದ್ದೇವೆ. ನಮ್ಮ ಶಾಲೆಗಳಲ್ಲಿ ಬೋಧನಾ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗಬೇಕಾಗಿದೆ ಎಂದರು.ಾಸಗಿ ಸಹಭಾಗಿತ್ವದೊಂದಿಗೆ ರಾಜ್ಯದ ಸರಕಾರಿ ಶಾಲೆಗಳಲ್ಲಿ ವಿಶೇಷವಾಗಿ ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯದಲ್ಲಿ 5,000 ಶಾಲೆಗಳನ್ನು ಆಯ್ಕೆ ಮಾಡಿದ್ದೇವೆ. ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಪ್ರತಿವಿಧಾನಸಭಾ ಕ್ಷೇತ್ರದ ಸರಕಾರಿ ಶಾಲೆಗಳ ಅಭಿವೃದ್ಧಿಗೆ 10 ಲಕ್ಷ ರೂ. ನೀಡಲಿದೆ. ಸರಕಾರಿ ಶಾಲೆಗಳನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಈ ಚಿಂತನೆ ನಡೆದಿದೆ ಎಂದರು.
 
ಸರಕಾರಿ ಶಾಲೆಗಳಲ್ಲೂ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದರು. ಎಲ್ಲ ಸಮುದಾಯದವರು ಒಂದಾಗಿ ಬಾಳುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾಗಿದೆ. ಒಂದಾಗಿ ಬಾಳಬೇಕೆಂಬ ಸಂದೇಶವನ್ನು ಎಲ್ಲ ಧರ್ಮ ಗ್ರಂಥಗಳು ಸಾರಿದ್ದು, ಎಲ್ಲ್ಲ ಸಮುದಾಯದವರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ವೇದವಾಕ್ಯದೊಂದಿಗೆ ದ್ವೇಷವನ್ನು ಬಿಟ್ಟು ಪ್ರೀತಿಯಿಂದ ಬಾಳುವಂತಾಗಬೇಕು ಎಂದರು.

ಸಮಾರಂಭವನ್ನು ಶಾಸಕ ಕಿಮ್ಮನೆ ರತ್ನಾಕರ ಉದ್ಘಾಟಿಸಿದರು. ವೇದಿಕೆಯಲ್ಲಿ ಜಾಮಿಯ ಮಸೀದಿ ಧರ್ಮ ಗುರುಗಳಾದ ಮುಹಮ್ಮದ್ ಇಸಾಕ್ ನದ್ವಿ, ಸಂಯುಕ್ತ ಒಕ್ಕೂಟದ ಗೌರವಾಧ್ಯಕ್ಷ ಇಬ್ರಾಹೀಂ ಶರ್ೀ, ಉಪಾಧ್ಯಕ್ಷ ದಸ್ತಗಿರ್ ಖುರೇಶಿ, ಸಂಚಾಲಕ ಮುಹಮ್ಮದ್ ಇಬ್ರಾಹೀಂ, ತಾಪಂ ಅಧ್ಯಕ್ಷೆ ನವಮಣಿ, ಜಿಪಂ. ಸದಸ್ಯೆ ಭಾರತಿ ಪ್ರಭಾಕರ್ ಮುಂತಾದವರಿದ್ದರು. ಸಂದರ್ಭದಲ್ಲಿ ಹಿರಿಯ ಉದ್ಯಮಿ ಹಾಜಿ ಶೇಖ್ ಅಹ್ಮದ್, ನಿವೃತ್ತ ಮುಖ್ಯೋಪಾಧ್ಯಾಯ ಮುಹಮ್ಮದ್ ವಝೀರ್‌ಖಾನ್ ಹಾಗೂ ತಾಲೂಕಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಅರಬ್ಬಿ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು.

ಭಾರತ ದೇಶ ಬಲಿಷ್ಠವಾಗುವುದು ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗದವರಿಂದಲ್ಲ. ಶಾಲೆಯಲ್ಲಿ ಕಲಿಯುವ, ಮೈದಾನದಲ್ಲಿ ಆಟವಾ ಡುತ್ತಿರುವ ಮಕ್ಕಳಿಂದ ಮಾತ್ರ. ಯುವಕರು ಧಾರ್ಮಿಕ ಮುಖಂಡರ ಮಾರ್ಗದರ್ಶನ ದೊಂದಿಗೆ ನೆಮ್ಮದಿಯ ಜೀವನ ನಡೆಸುವ ಗುರಿ ಹೊಂದಬೇಕು. ದೇಶದ ಪ್ರಜಾಪ್ರಭುತ್ವದ ಸೌಂದರ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ದ್ವೇಷ, ಅಹಂಕಾರದಿಂದ ದೂರ ಉಳಿದು ಪ್ರೀತಿ, ವಿಶ್ವಾಸ ಅಭಿಮಾನದೊಂದಿಗೆ ಪ್ರತಿಯೊಂದು ಧರ್ಮದವರು ಸಾಮರಸ್ಯದೊಂದಿಗೆ ಬಾಳುವಂತಾಗಬೇಕು.

-ಯು.ಟಿ. ಖಾದರ್,ಆಹಾರ ಸಚಿವ


 ಲ್ಲ ಸಮುದಾಯದವರನ್ನೂ ಪ್ರೀತಿಸುವ ಮನೋ ಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಏನು ಕೊಡಬೇಕು ಎಂಬುದನ್ನು ನಾವು ಪ್ರತಿಪಾದಿಸಬೇಕಾಗಿದೆ. ನಮ್ಮಲ್ಲಿನ ಶಕ್ತಿ, ಸಾಮರ್ಥ್ಯಕ್ಕಿಂತ ಸಮಾಜದಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಹಾಗೂ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಅತ್ಯಗತ್ಯ.

-ಕಿಮ್ಮನೆ ರತ್ನಾಕರ,  ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News