ಬಾಲಕಿಯ ಅತ್ಯಾಚಾರ

Update: 2016-09-25 18:46 GMT

ತಿ.ನರಸೀಪುರ, ಸೆ.25: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ತಿ.ನರಸೀಪುರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ದೊಡ್ಡೇಬಾಗಿಲು ಗ್ರಾಮದ ಉಪೇಂದ್ರ ಆಲಿಯಾಸ್ ರಾಜರತ್ನಂ (21) ಬಂಧಿತ ಆರೋಪಿ. ಈತ ತನ್ನ ಗ್ರಾಮದ 15 ವರ್ಷದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಕಳೆದ 2 ದಿನಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ವಿಷಯ ತಿಳಿದ ಮನೆಯವರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ತಿ.ನರಸೀಪುರ ಪಟ್ಟಣ ಠಾಣೆಯ ಪೊಲೀಸರು ಆರೋಪಿ ಉಪೇಂದ್ರನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News