ಭಾರತದಿಂದ ಪಿತೂರಿ ಅಭಿಯಾನ: ಪಾಕ್

Update: 2016-09-25 18:49 GMT

ಇಸ್ಲಾಮಾಬಾದ್, ಸೆ. 25: ತಾನು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪವನ್ನು ಪಾಕಿಸ್ತಾನ ರವಿವಾರ ತಿರಸ್ಕರಿಸಿದೆ. ಭಾರತದ ಈ ಹೇಳಿಕೆಗಳು ವಿಶ್ವದ ಗಮನವನ್ನು ಕಾಶ್ಮೀರದಿಂದ ಬೇರೆಡೆಗೆ ಸೆಳೆಯಲು ‘‘ಅತ್ಯಂತ ಸಮರ್ಪಕವಾಗಿ ಯೋಜಿಸಲಾದ ಪಿತೂರಿ ಅಭಿಯಾನ’’ದ ಭಾಗವಾಗಿದೆ ಎಂದು ಅದು ಹೇಳಿದೆ.

 ಕೇರಳದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡಿರುವ ಮೋದಿ, ‘‘ಪಾಕಿಸ್ತಾನಕ್ಕೆ ಕಳಂಕ ತರಲು’’ ಪ್ರಯತ್ನಿಸಿದ್ದಾರೆ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ಹೇಳಿದೆ.

 
‘‘ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಆಧಾರರಹಿತ ಆರೋಪಗಳನ್ನು ಮಾಡುತ್ತಾ ಭಾರತೀಯ ನಾಯಕತ್ವವು ಯೋಜಿತ ಪಿತೂರಿ ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದು ದುರದೃಷ್ಟಕರವಾಗಿದೆ. ಅತ್ಯುನ್ನತ ರಾಜಕೀಯ ಮಟ್ಟದಲ್ಲಿ ಇಂಥ ಬೇಜಾವಾಬ್ದಾರಿಯುತ ವರ್ತನೆಯ ಪ್ರದರ್ಶನ ವಿಷಾದನೀಯವಾಗಿದೆ’’ ಎಂದು ಪಾಕಿಸ್ತಾನದ ವಿದೇಶ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News