ಮಳೆ ನಿಂತರೂ ನಿಲ್ಲದ ಪ್ರವಾಹ

Update: 2016-09-25 18:51 GMT

ಕಲಬುರಗಿ, ಸೆ.25: ಮಳೆ ಕಡಿಮೆಯಾದರೂ, ಕಲಬುರಗಿ ಪ್ರದೇಶದಲ್ಲಿ ಪ್ರವಾಹ ಮುಂದುವರಿದಿದ್ದು, ಜಿಲ್ಲೆಯಲ್ಲಿರುವ ಪ್ರಮುಖ ಜಲಾಶಯಗಳು ತುಂಬಿ, ಒಳಹರಿವು ಕಡಿಮೆಯಾದ ಕಾರಣ ನೀರು ಹರಿಸುವುದನ್ನು ತಡೆಹಿಡಿಯಲಾಗಿದೆ.
ಕಲಬುರಗಿ ವ್ಯಾಪ್ತಿಯಲ್ಲಿ ಶನಿವಾರ 12 ಮಿ.ಮೀ. ಸರಾಸರಿ ಮಳೆಯಾಗಿದ್ದು, ಇಲ್ಲಿನ ಆಳಂದ ತಾಲೂಕಿನಲ್ಲಿ-5, ಚಿಂಚೋಳಿ-9, ಚಿತ್ತಾಪುರ-9 ಮತ್ತು ಸೇಡಂನಲ್ಲಿ 32 ಮಿ.ಮೀಟರ್ ಮಳೆಯಾಗಿದೆ ಎಂದು ಅಧಿಕಾರಿರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರವಾಹ ಪರಿಸ್ಥಿತಿ ಕಡಿಮೆಯಾಗದ ಕಾರಣ ಸೇಡಂ ತಾಲೂಕಿನ ಮಳಖೇಡ ಸೇತುವೆ ಮತ್ತು ಚಿತ್ತಾಪುರ ತಾಲೂಕಿನ ದಂಡೋತಿ ಸೇತುವೆ ಮೇಲೆ ನೀರು ಬಂದಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗಿದ್ದು, ಆ ಪ್ರದೇಶದ ಗ್ರಾಮಗಳು ನಡುಗಡ್ಡೆಗಳಾಗಿವೆ. ಇನ್ನೂ ಸಂಚಾರ ಆರಂಭವಾಗಿಲ್ಲ.ದೇ ರೀತಿ, ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮಕ್ಕೆ ಕಾಗಿಣಾ ನದಿ ನೀರು ನುಗ್ಗಿ ಗ್ರಾಮ ಕಳೆದ ಮೂರು ದಿನಗಳಿಂದ ನಡುಗಡ್ಡೆಯಂತಾಗಿದೆ. ಮೂರು ದಿನಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಗ್ರಾಮಸ್ಥರು ಪ್ರವಾಹದ ಭೀತಿಯೊಂದಿಗೆ ಕತ್ತಲೆಯಲ್ಲಿ ಕಾಲ ನೂಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News