ದಸರಾ ಉತ್ಸವಕ್ಕೆ‘ಸುವರ್ಣ ರಥ’ ವಿಶೇಷ ಪ್ಯಾಕೇಜ್: ಸಚಿವ ಖರ್ಗೆ

Update: 2016-09-26 18:30 GMT

ಬೆಂಗಳೂರು, ಸೆ. 26: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಬಗ್ಗೆ ಪ್ರಚಾರಕ್ಕಾಗಿ ಸುವರ್ಣ ರಥ ‘ಮೈಸೂರು ದಸರಾ’ ವಿಶೇಷ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಹಿನ್ನೆಲೆಯಲ್ಲಿ ಮೈ ದಸರಾ ವೆಬ್‌ಸೈಟ್‌ನಲ್ಲಿ ‘ವಿಡಂಬನೆಯ ರಜೆ ಚೀಟಿ ಪಡೆಯುವ ಸ್ಪರ್ಧೆ’ಯನ್ನು ಏರ್ಪಡಿಸಿದ್ದು, ವಿಜೇತರಿಗೆ ರಾಯಲ್ ಮೈಸೂರು ಸುವರ್ಣ ರಥದ 2 ಪ್ರವಾಸದ ಟಿಕೆಟ್ ನೀಡಲಾಗುವುದು ಎಂದರು.
ವಿಶೇಷ ಪ್ಯಾಕೇಜ್: ಕೆಎಸ್‌ಐಡಿಸಿ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆ ಅ.1ರಿಂದ 10ರ ವರೆಗೆ ವಿಶೇಷ ಪ್ಯಾಕೇಜ್ ಆರಂಭಿಸಿದ್ದು, 2 ರಾತ್ರಿ 1 ದಿನದ ಪ್ರವಾಸದಲ್ಲಿ ಅತಿಥಿಗಳಿಗೆ ಪಂಚತಾರಾ ಹೋಟೆಲ್ ಆತಿಥ್ಯ ದೊರೆಯಲಿದ್ದು, ದಸರಾ ಉತ್ಸವ ಕಣ್ತುಂಬಿಕೊಳ್ಳಲು ಒಬ್ಬ ವ್ಯಕ್ತಿಗೆ 30 ಸಾವಿರ ರೂ.ನಿಗದಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಪರಿಚಯಿಸಲು ‘ರಾಯಲ್ ರೂಟ್ಸ್’ ಎಂಬ ವಿಶಿಷ್ಟ ಪ್ಯಾಕೇಜ್ ಆರಂಭಿಸಿದ್ದು, ಅಂಬಾ ವಿಲಾಸ್ ಅರಮನೆ, ಲಲಿತ ಮಹಲ್ ಪ್ಯಾಲೇಸ್, ಚಲುವಾಂಬ ಪ್ಯಾಲೆಸ್, ಕಾರಂಜಿ ಮ್ಯಾನ್‌ಷನ್ ಸೇರಿದಂತೆ ಏಳು ಸ್ಥಳನ್ನು ಪರಿಚಯಿಸಲಾಗುವುದು ಎಂದರು.ಾಶ ಅಂಬಾರಿ: ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಲು ಅ.1ರಿಂದ 15ರ ವರೆಗೆ ಮೈಸೂರಿಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ‘ಆಕಾಶ ಅಂಬಾರಿ’ ವಿಮಾನಯಾನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ 4 ಸಾವಿರ ರೂ.ದರ ನಿಗದಿಪಡಿಸಲಾಗಿದೆ ಎಂದರು.
 ಆಸಕ್ತ ಪ್ರವಾಸಿಗರು ಡಿಡಿಡಿ.ಚಿಟಟಞಟಡಿ.್ಚಟಞ, ಡಿಡಿಡಿ. ಚ್ಟ್ಞಠಿಟ್ಝಜಿ.್ಞಛಿಠಿ ಅಥವಾ ಡಿಡಿಡಿ.ಞಚ್ಟ.ಜ್ಞಿಸಂಪರ್ಕಿಸ ಬಹುದು ಎಂದ ಅವರು, ಮೈಸೂರು ದಸರಾ ಉತ್ಸವದ ಪ್ರಚಾರಕ್ಕೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.


‘ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಮೈಸೂರು ಭಾಗದ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಪ್ರವಾಸೋದ್ಯಮದ ಮೇಲೆಯೂ ಆ ಭಾಗದ ಶೇ.40ರಷ್ಟು ಮಂದಿ ಆಶ್ರಯಿಸಿದ್ದು, ದಸರಾ ಉತ್ಸವದ ವೇಳೆಗೆ ಪ್ರವಾಸೋದ್ಯಮ ಪುನಶ್ಚೇತನಗೊಳ್ಳುವ ವಿಶ್ವಾಸವಿದೆ’-ಪ್ರಿಯಾಂಕ ಖರ್ಗೆ ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News