ಗರ್ಭಪಾತ ಮೇಲ್ವರ್ಗದಲ್ಲೇ ಹೆಚ್ಚುಭವಿಷ್ಯದಲಿ ್ಲ ಹೆಣ್ಣಿಗಾಗಿ ಹೋರಾಟ ಅನಿವಾರ್ಯ: ಉಗ್ರಪ್ಪಆತಂಕ

Update: 2016-09-26 18:30 GMT

ಬೆಂಗಳೂರು, ಸೆ.26: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಲಿಂಗಾನುಪಾತ ಮುಂದಿನ ದಿನಗಳಲ್ಲಿ ಹೆಣ್ಣಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಲಿದೆ ಎಂದು ಮಹಿಳೆ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಜಂಟಿಯಾಗಿ ಆಯೋಜಿಸಿದ್ದ ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆ ನಿಷೇಧ ಅಧಿನಿಯಮ 1994ರ ಕಾಯ್ದೆ ಕುರಿತು ಅರಿವು ಮೂಡಿಸುವ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 ನಮ್ಮಲ್ಲಿನ ನಂಬಿಕೆ ಮತ್ತು ಮೂಢನಂಬಿಕೆಗಳಿಂದ ಹಾಗೂ ಗಂಡು ಮಕ್ಕಳ ವ್ಯಾಮೋಹದಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸ ಸೃಷ್ಟಿಯಾಗಿದೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 1000 ಪುರುಷರಿಗೆ 948 ಮಹಿಳೆಯರು ಇದ್ದಾರೆ. ಬೆಂಗಳೂರು ನಗರದಲ್ಲಿ ಲಿಂಗಾನುಪಾತ 724ಕ್ಕೆ ಇಳಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.ರ್ಭಪಾತ ಮೇಲ್ವರ್ಗದಲ್ಲಿ ಹೆಚ್ಚು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲಿಂಗಾನುಪಾತಕ್ಕಿಂತ ಮೇಲ್ವರ್ಗದಲ್ಲೇ ಗರ್ಭಪಾತ ಹೆಚ್ಚು. ಪರಿಶಿಷ್ಟ ಜಾತಿಯಲ್ಲಿ 1,000 ಪುರುಷರಿಗೆ 1,019 ಮಹಿಳೆಯರು ಇದ್ದರೆ, ಪರಿಶಿಷ್ಟ ಪಂಗಡದಲ್ಲಿ 1,008 ಮಹಿಳೆಯರು ಇದ್ದಾರೆ. ಆದರೆ ಮೇಲ್ವರ್ಗದಲ್ಲೇ ಹೆಚ್ಚು ಎಂದರೆ ಶೇ.10ರಷ್ಟು ಲಿಂಗಾನುಪಾತ ಕಡಿಮೆ ಇದೆ ಎಂದು ವಿವರಿಸಿದರು.ರ್ಭಪಾತ ಮಾಡಿಸುವವರಲ್ಲಿ ಬಹುತೇಕ ಹಣವಂತರೆ. ಪರವಾನಿಗೆ ಇಲ್ಲದೆ ಸ್ಕಾನಿಂಗ್ ಸೆಂಟರ್ ಮತ್ತು ಅಲ್ಟ್ರಾಸೌಂಡ್ ಕೇಂದ್ರಗಳಲ್ಲಿ ಗರ್ಭಪಾತ ದಂಧೆ ನಡೆಯುತ್ತಿದೆ. ಮೊದಲು ರಾಜ್ಯದಲ್ಲಿ ದುರ್ಬಳಕೆ ಆಗುತ್ತಿರುವ ಸ್ಕಾನಿಂಗ್ ಸೆಂಟರ್ ಮತ್ತು ಅಲ್ಟ್ರಾಸೌಂಡ್ ಕೇಂದ್ರಗಳನ್ನು ಪತ್ತೆ ಹಚ್ಚಿ ಮುಚ್ಚಿಸುವ ಕಾರ್ಯವಾಗಬೇಕು ಎಂದರು.ರೋಗ್ಯ ಇಲಾಖೆಯ ಆಯುಕ್ತ ಡಾ.ರತನ್ ಕೇಲ್ಕರ್ ಮಾತನಾಡಿ, ದೇಶದಲ್ಲಿ ಪ್ರಸವಪೂರ್ವ ಲಿಂಗ ಪತ್ತೆಯಿಂದಾಗಿ ಹೆಣ್ಣು ಮ್ಕಕಳ ಅನುಪಾತ ಕಡಿಮೆಯಾಗುತ್ತಿರುವುದು ಆತಂಕಕಾರಿ. ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ಕಾಯ್ದೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದರೊಂದಿಗೆ ಕಾಯ್ದೆಯನ್ನು ಶೇ.100 ರಷ್ಟು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕರೆ ನೀಡಿದರು.
 ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಅರುಣ, ಜಿಲ್ಲಾ ನ್ಯಾಯಾಧೀಶ ರಮೇಶ್, ನ್ಯಾಯಾಧೀಶ ನಟರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News