ತೀರ್ಪನ್ನು ಟೀಕಿಸಿ, ನ್ಯಾಯಾಧೀಶರನ್ನಲ್ಲ: ನ್ಯಾ. ನಾಗಮೋಹನ್ ದಾಸ್

Update: 2016-09-26 18:32 GMT

ಬೆಂಗಳೂರು, ಸೆ.26: ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ಟೀಕಿಸಬಹುದೇ ಹೊರತು ನ್ಯಾಯಾಧೀಶರನ್ನಲ್ಲ. ಒಂದು ವೇಳೆ ನ್ಯಾಯಾಧೀಶರ ಹೆಸರನ್ನೇಳಿ ದೂರಿದರೆ ಅದು ಅಪರಾಧವಾಗುತ್ತದೆ ಎಂದು ನ್ಯಾ.ನಾಗಮೋಹನ್ ದಾಸ್ ಸರಕಾರಕ್ಕೆ ತಿಳಿ ಹೇಳಿದರು.

ಗ್ರಾಮಭಾರತ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕಾವೇರಿ ಸಮಸ್ಯೆಗಳು ಮತ್ತು ಮುಂದಿನ ಸವಾಲುಗಳು ಕುರಿತ ವಿಚಾರ ಮಂಥನದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್, ಯಾವುದೇ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪನ್ನು ನೀಡಿದ ನಂತರ ಅದನ್ನು ಪರಾಮರ್ಶಿಸುವ ಹಾಗೂ ಟೀಕಿಸುವ ಹಕ್ಕನ್ನು ಸಂವಿಧಾನ ಒದಗಿಸಿದೆ. ಆದರೆ, ಯಾರೊಬ್ಬರು ನ್ಯಾಯಾಧೀಶರ ತೀರ್ಪಿನಿಂದ ಅನ್ಯಾಯವಾಗಿದೆ ಎಂದು ದೂರುವಂತಿಲ್ಲ. ಆದ್ದರಿಂದ ತೀರ್ಪನ್ನು ಟೀಕಿಸಬಹುದೇ ಹೊರತು ನ್ಯಾಯಾಧೀಶರನ್ನಲ್ಲ. ಒಂದು ವೇಳೆ ನ್ಯಾಯಾಧೀಶರ ಹೆಸರನ್ನೇಳಿ ದೂರಿದರೆ ಅದು ಅಪರಾಧವಾಗುತ್ತದೆ ಎಂದು ತಿಳಿ ಹೇಳಿದರು.ಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಿರುವ ನಿರ್ಣಯವನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದ್ದರೂ ನ್ಯಾಯಾಂಗ ನಿಂದನೆ ತೂಗುಗತ್ತಿ ಸರಕಾರದ ಮೇಲಿದೆ. ಆದರೆ, ಸುಪ್ರೀಂಕೋರ್ಟ್‌ಗೆ ವಿಧಾನಸಭೆ ಸರ್ವಾನುಮತದ ಅಂಗೀಕಾರವನ್ನು ಸರಿಯಾಗಿ ಮನವರಿಕೆ ಮಾಡಿಕೊಟ್ಟರೆ ನ್ಯಾಯಾಂಗ ನಿಂದನೆಯಿಂದ ಪಾರಾಗುವ ಎಲ್ಲ ಅವಕಾಶವೂ ಇದೆ ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.ಾವೇರಿ ಮೇಲುಸ್ತುವಾರಿ ಸಮಿತಿ ಆದೇಶವನ್ನು ಮಾರ್ಪಡಿಸಲು ಸುಪ್ರೀಂಗೆ ಅರ್ಜಿ ಸಲ್ಲಿಸಿದರೆ ಅಲ್ಲಿಯೂ ರಾಜ್ಯಕ್ಕೆ ಹಿನ್ನೆಡೆಯಾಯಿತು. ಮೇಲುಸ್ತುವಾರಿ ಸಮಿತಿ ಆದೇಶ್ಕಕಿಂತಲೂ ಮಾರಕವಾಗಿ ಸುಪ್ರೀಂ ಕೋರ್ಟ್ ಆದೇಶ ಬಂತು. ಸರಕಾರದ ತಪ್ಪು ನಿರ್ಧಾರದಿಂದ ಈ ಆದೇಶ ಬಂದಿದೆ ಎಂದು ಅಭಿಪ್ರಾಯಪಟ್ಟರು. ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವಾಗ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲವೆಂದು ಹೇಳಿಕೊಂಡಿತ್ತು. ಆದರೆ, ಮರುದಿನವೇ ಕೃಷಿಗೆ ನೀರು ಕೊಡುವುದಾಗಿ ಹೇಳಿತ್ತು. ಇದು ಸರಕಾರ ಮಾಡಿದ ಗುರುತರವಾದ ತಪ್ಪು. ಸರಕಾರ ಈ ಬಗ್ಗೆ ನ್ಯಾಯಾಲಯಕ್ಕೆ ಸರಿಯಾದ ವರದಿ ಸಲ್ಲಿಸಿದ್ದರೆ, ಈ ಪರಿಸ್ಥಿತಿಯೇ ಸೃಷ್ಟಿಯಾಗುತ್ತಿರಲಿಲ್ಲ ಎಂದರು.ಾವೇರಿ ವಿಚಾರದಲ್ಲಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುವಲ್ಲಿ ಸೋತಿದ್ದೇವೆ. ಕಾವೇರಿ ನೀರು ಹಂಚಿಕೆ ತೀರ್ಪಿನಲ್ಲಿ ಸರಕಾರ, ನ್ಯಾಯಾಂಗ ಹಾಗೂ ಅಧಿಕಾರಿ ವರ್ಗ ಎಲ್ಲವೂ ಇದರಲ್ಲಿ ಎಡವಿವೆ ಎಂದು ನ್ಯಾ.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News