ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಕ್ಲಬ್ ಸೇರಿದ ಪ್ರಪ್ರಥಮ ಭಾರತೀಯ ಈ ಬೆಂಗಳೂರು ಹುಡುಗ!

Update: 2016-10-05 03:08 GMT

ಬೆಂಗಳೂರು, ಅ.5: ಮೂರು ವರ್ಷದ ಹಿಂದೆ ಇಲ್ಲಿನ ಇಷಾನ್ ಪಂಡಿತ್ ಬದುಕಿನ ಪ್ರಮುಖ ನಿರ್ಧಾರ ಕೈಗೊಂಡು, ಅಧ್ಯಯನಕ್ಕೆ ಗುಡ್‌ಬೈ ಹೇಳಿ, ಯೂರೋಪ್‌ನಲ್ಲಿ ವೃತ್ತಿಪರ ಫುಟ್‌ಬಾಲ್ ತಾರೆಯಾಗಿ ಬೆಳೆಯುವ ಕನಸನ್ನು ತಂದೆ-ತಾಯಿ ಜತೆ ಹಂಚಿಕೊಂಡರು. ಇದು ಹಲವರಲ್ಲಿ ಅಚ್ಚರಿ ತಂದರೆ, ಕೆಲವರು ಕುಹಕದಿಂದ ನಕ್ಕಿದ್ದರು. ಆದರೆ ಆ ಹುಡುಗನ ಶ್ರದ್ಧೆ ಹಾಗೂ ಪ್ರೀತಿ ಕೊನೆಗೂ ಫಲ ನೀಡಿದೆ. ಕಳೆದ ಸೋಮವಾರ ಸ್ಪೇನ್‌ನ ಲಾ ಲಿಗಾ ಫುಟ್ಬಾಲ್ ಕ್ಲಬ್ ಜೊತೆ ವೃತ್ತಿಪರ ಗುತ್ತಿಗೆ ಮಾಡಿಕೊಂಡ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಬೆಂಗಳೂರು ಮೂಲದ 18ರ ಬಾಲಕ ಒಂದು ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದಾನೆ. ಈತ ಲಾ ಲಿಗಾದಲ್ಲಿ 11ನೇ ಆಟಗಾರ. ಇವರಿಗೆ 50ನೆ ನಂಬರ್‌ನ ನೀಲಿ ಹಾಗೂ ಬಿಳಿ ಪಟ್ಟಿಯ ಜೆರ್ಸಿ ನೀಡಲಾಗಿದೆ. ಕ್ಲಬ್‌ನ ಉಪಾಧ್ಯಕ್ಷ ಹಾಗೂ ಮಾಲಕ ಫಿಲಿಫ್ ಮೊರೇನೊ, ಈಸ್ಟಾಡಿಯೊ ಮುನ್ಸಿಪಲ್ ಡೆ ಬುಟ್ರಕ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಜೆರ್ಸಿ ಪ್ರದಾನ ಮಾಡಿದರು.

ಮುಖ್ಯ ಕ್ಲಬ್‌ಗೆ ಸಹಿ ಮಾಡಿದ್ದರೂ, 19ರ ವಯೋಮಿತಿ ತಂಡಕ್ಕಾಗಿ ಆಡಲಿದ್ದಾರೆ. ಸ್ಪೇನ್‌ನಲ್ಲಿ ಮೂರು ವರ್ಷಗಳ ಕಠಿಣ ತರಬೇತಿ ಪಡೆದದ್ದು ಕೊನೆಗೂ ಫಲ ನೀಡಿದೆ ಎಂದು ಇಷಾನ್ ಸಂತಸ ವ್ಯಕ್ತಪಡಿಸಿದರು. ಈ ಸಾಧನೆ ಮಾಡಬೇಕಾದರೆ, ನಾನು ಓದಿಗೆ ಗುಡ್‌ಬೈ ಹೇಳಿದ ದಿನದಿಂದ ಈ ಕ್ಷಣದವರೆಗೂ ನನ್ನ ಕನಸನ್ನು ಬಿಟ್ಟಿರಲಿಲ್ಲ ಎಂದು ಮ್ಯಾಡ್ರಿಡ್‌ನಿಂದ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಇಶಾನ್ ವಿವರಿಸಿದರು.

 ಕಳೆದ ವರ್ಷದ ಕೊನೆಗೆ ಇಶಾನ್, ಎರಡನೆ ಡಿವಿಷನ್ ಕ್ಲಬ್‌ಗೆ ಸೇರಿದ್ದರು. ಆದರೆ ಆಗ 18 ವರ್ಷ ಆಗದ ಕಾರಣ ವೃತ್ತಿಪರ ಫುಟ್ಬಾಲ್‌ಗೆ ಸಹಿ ಮಾಡುವಂತಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News