ಚೀನಾ ಜೊತೆಗಿನ ಆರ್ಥಿಕ ಬಾಂಧವ್ಯ ಮಹತ್ವದು್ದ: ಅಮೆರಿಕ

Update: 2016-10-07 18:35 GMT

ವಾಶಿಂಗ್ಟನ್, ಅ. 7: ಜಗತ್ತಿನ ಎರಡು ಅತ್ಯಂತ ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾಗಳ ನಡುವಿನ ಆರ್ಥಿಕ ಸಂಬಂಧ ಬಹುಶಃ ಜಗತ್ತಿನ ಅತ್ಯಂತ ಮಹತ್ವದ ಆರ್ಥಿಕ ಪಾಲುದಾರಿಕೆಯಾಗಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾಕೋಬ್ ಲ್ಯೂ ಹೇಳಿದ್ದಾರೆ.

ಆದಾಗ್ಯೂ, ಚೀನಾದ ಎದುರು ಹಲವು ಸವಾಲುಗಳಿವೆ ಎಂದು ಅವರು ಹೇಳಿದರು. ಚೀನಾ ಉತ್ಪಾದನಾ ಆರ್ಥಿಕತೆಯಿಂದ ಗ್ರಾಹಕ ಕೇಂದ್ರಿತ ಆರ್ಥಿಕತೆಯತ್ತ ಪರಿವರ್ತನೆಗೊಳ್ಳುತ್ತಿದೆ ಹಾಗೂ ಅದರೊಂದಿಗೆ ಅಮೆರಿಕದೊಂದಿಗಿನ ಅದರ ಸಂಬಂಧವೂ ಪರಿವರ್ತನೆಯ ಹಾದಿಯಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News