ಚೀನಾ ನೆರವಿಂದ ಪ್ರಥಮ ಚಂದ್ರಯಾನ ಕೈಗೊಂಡ ಪಾಕಿಸ್ತಾನ

Update: 2024-05-04 16:28 GMT

Screengrab from X posted@FaridKhan

ಇಸ್ಲಮಾಬಾದ್: ಶುಕ್ರವಾರ ಚೀನಾದ ಚಂದ್ರಯಾನ ಯೋಜನೆಯ ಜತೆಯಲ್ಲೇ ಪಾಕಿಸ್ತಾನದ ಚಂದ್ರಯಾನ ಉಪಗ್ರಹವೂ ಚಂದ್ರನತ್ತ ಚಿಮ್ಮಿದೆ ಎಂದು ವರದಿಯಾಗಿದೆ.

ಚಂದ್ರನ ಮೇಲ್ಮೈಯ ಅಧ್ಯಯನ ನಡೆಸಲು ಚೀನಾ ಕೈಗೊಂಡಿರುವ 6ನೇ ಚಂದ್ರಯಾನದ ಜತೆಯಲ್ಲೇ ಪಾಕಿಸ್ತಾನ ಪ್ರಥಮ ಚಂದ್ರಯಾನ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಪಾಕಿಸ್ತಾನದ ಐಕ್ಯೂಬ್-ಕ್ಯು ಉಪಗ್ರಹವನ್ನು ಚೀನಾದ ಶಾಂಘೈ ವಿವಿ ಹಾಗೂ ಪಾಕಿಸ್ತಾನದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಸುಪಾರ್ಕೊ)ಯ ಸಹಯೋಗದಿಂದ ಅಭಿವೃದ್ಧಿಪಡಿಸಲಾಗಿದೆ. ಚಂದ್ರಯಾನದ ಉಡಾವಣೆ ಯಶಸ್ವಿಯಾಗುತ್ತಿದ್ದಂತೆಯೇ ದೇಶದ ಜನರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿರುವ ಪಾಕ್ ಪ್ರಧಾನಿ ಶಹಬಾಝ್ ಷರೀಫ್ `ಅಣ್ವಸ್ತ್ರ ಕ್ಷೇತ್ರದಲ್ಲಿ ತೋರಿದ ಸಾಧನೆಯನ್ನೇ ಪಾಕ್ ವಿಜ್ಞಾನಿಗಳು, ಇಂಜಿನಿಯರ್‍ಗಳು ಪುನರಾವರ್ತಿಸಿದ್ದಾರೆ' ಎಂದು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News