ಆಸ್ಪತ್ರೆಯ ಬಿಲ್ ಕಟ್ಟಲು ನವಜಾತ ಶಿಶುವಿನ ಶವವಿಟ್ಟು ಭಿಕ್ಷೆ ಬೇಡಿದ ಆದಿವಾಸಿ

Update: 2016-10-09 11:31 GMT

ಜಬಲ್‌ಪುರ,ಅಕ್ಟೋಬರ್ 9: ಮಧ್ಯಪ್ರದೇಶದ ಜಬಲ್ ಪುರದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.ಇಲ್ಲಿ ಒಬ್ಬ ಆದಿವಾಸಿ ಯುವಕ ಬೀದಿ ಬದಿಯಲ್ಲಿ ತನ್ನ ಮತೃ ನವಜಾತ ಶಿಶುವನ್ನು ಚೀಲದಲ್ಲಿಟ್ಟು ಆಸ್ಪತ್ರೆಯ ಹಣ ಪಾವತಿಸಲಿಕ್ಕಾಗಿ ಭಿಕ್ಷೆ ಬೇಡಿದ ಘಟನೆ ಶನಿವಾರ ವರದಿಯಾಗಿದೆ. ಆಸ್ಪತ್ರೆಯ ಆಡಳಿತ ಹೆರಿಗೆಯಾದ ಯುವಕನ ಪತ್ನಿಯನ್ನು  ಹಿಡಿದಿಟ್ಟು ಹಣ ತರುವಂತೆ ಆತನನ್ನು ಕಳುಹಿಸಿತ್ತು ಎನ್ನಲಾಗಿದೆ.ಇದರಿಂದ  ಗತ್ಯಂತರವಿಲ್ಲದೆ ಬೀದಿಯಲ್ಲಿ ಭಿಕ್ಷೆ ಎತ್ತಿ ಹಣ ಒಟ್ಟುಗೂಡಿಸಲು ಅತಿ ಶ್ರಮಿಸಿದ್ದಾನೆ. ಶನಿವಾರ ಯುವಕ ಭಿಕ್ಷೆ ಬೇಡುತ್ತಿರುವುದನ್ನು ಮತ್ತು ಅವನ ಕೈಯಲ್ಲಿ ಚೀಲವಿರುವುದನ್ನು ನೋಡಿ ಜನರು ಏನೆಂದು ಕೇಳಿದ್ದಾರೆ. ಅದರಲ್ಲಿ ಮೃತ ಶಿಶುವಿನ ಪಾರ್ಥಿವ ಶರೀರ ಇತ್ತು. ಆತ ಕೇಳಿದವರಿಗೆಲ್ಲ ತನ್ನ ವಿಷಮ ಸ್ಥಿತಿಯನ್ನು ವಿವರಿಸಿದ್ದಾನೆ.

ಮಾಧ್ಯಮಗಳ ವರದಿ ಪ್ರಕಾರ ಭಿಕ್ಷೆ ಬೇಡುತ್ತಿದ್ದ ಯುವಕನ ಹೆಸರು ಕೃಷ್ಣಪಾಲ್ ಬೈಗಾ ಎಂದಾಗಿದೆ. ಯುವಕ ತನ್ನ ಗರ್ಭಿಣಿ ಪತ್ನಿಯನ್ನು ಹೆರಿಗೆಗಾಗಿ ಜಬಲ್‌ಪುರಕ್ಕೆ ಕರೆತಂದಿದ್ದ. ಮೊದಲು ಉಮರಿಯಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಆತ ಅಲ್ಲಿನ ವೈದ್ಯರು ಜಬಲ್ಪುರದ ಸರಕಾರಿ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದ್ದರು. ಪತ್ನಿಯ ಸ್ಥಿತಿ ತೀರಾ ನಾಜೂಕು ಆಗಿದ್ದರೂ ಜನನಿ ಎಕ್ಸ್‌ಪ್ರೆಸ್ ಮೂಲಕ ಜಬಲ್‌ಪುರಕ್ಕೆ ಕರೆತಂದಿದ್ದ. ಬಸ್ ಚಾಲಕ ಸರಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಯ ಬಳಿ ಬಿಟ್ಟು ಹೋಗಿದ್ದರಿಂದ ಆತ ಅಲ್ಲಿಯೇ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದ. ಅಲ್ಲಿ ಆತನ ಪತ್ನಿ ಮೃತ ಶಿಶುವನ್ನು ಹೆತ್ತಿದ್ದಳು. ಆಸ್ಪತ್ರೆಗೆ ಪಾವತಿಸಲು ಹಣ ಇಲ್ಲದ್ದರಿಂದ ನವಜಾತ ಶಿಶುವನ್ನು ಚೀಲದಲ್ಲಿಟ್ಟು ರಸ್ತೆ ಬದಿ ಭಿಕ್ಷೆ ಬೇಡತೊಡಗಿದ್ದ.

"ತನ್ನ ಬಳಿ ಮೃತ ಶಿಶುವಿನ ಶವದಫನಕ್ಕೂ ಹಣವಿಲ್ಲ, ಆಸ್ಪತ್ರೆಯ ಬಿಲ್‌ಕೊಡುವುದಕ್ಕೂ ಹಣವಿಲ್ಲ" ಎಂದು ಆದಿವಾಸಿ ಯುವಕ ಹೇಳಿಕೊಂಡಿದ್ದಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News