ಶೂ ಇಲ್ಲದೆ ಶಾಲೆಗೆ ಬಂದ ಬಾಲಕನಿಗೆ ಚಪ್ಪಲಿ ಹಾರ !

Update: 2016-10-09 12:24 GMT

ಮುಝಫರ್‌ನಗರ,ಅ.9: ಇಲ್ಲಿಗೆ ಸಮೀಪದ ಶಾಮ್ಲಿ ಜಿಲ್ಲೆಯ ಭಬಿಸಿಯಾ ಗ್ರಾಮದಲ್ಲಿ ಶೂ ಧರಿಸಿಕೊಂಡು ಶಾಲೆಗೆ ಬಂದಿಲ್ಲವೆಂಬ ಕುಲ್ಲಕ ಕಾರಣಕ್ಕೆ ಮೂರನೇ ತರಗತಿಯ ಬಾಲಕನಿಗೆ ದಂಡನೆಯಾಗಿ ಶಿಕ್ಷಕರು ಚಪ್ಪಲಿ ಹಾರವನ್ನು ತೊಡಿಸಿದ ಅಮಾನವೀಯ ಘಟನೆ ಶನಿವಾರ ನಡೆದಿದೆ.

ಈ ಬಗ್ಗೆ ಬಾಲಕನ ತಂದೆ ವೀರೆಂದ್ರ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗ ಶೂ ಬದಲಿಗೆ ಚಪ್ಪಲಿ ಧರಿಸಿಕೊಂಡು ಶಾಲೆಗೆ ಹೋಗಿದ್ದ. ಆತನಿಗೆ ಶಿಕ್ಷೆಯಾಗಿ ಶಿಕ್ಷಕರು ಅದೇ ಚಪ್ಪಲಿಯ ಹಾರವನ್ನು ತೊಡಿಸಿ ಅವಮಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ಕಂಧ್ಲಾ ಥಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News