ಬ್ರಹ್ಮಪುತ್ರಾ ಉಪನದಿಗೆ ಅಣೆಕಟ್ಟು ನಿರ್ಮಾಣ ಭಾರತಕ್ಕೆ ತೊಂದರೆಯಿಲ್ಲ: ಚೀನಾ

Update: 2016-10-09 15:49 GMT

ಬೀಜಿಂಗ್,ಅ.8: ಬ್ರಹ್ಮಪುತ್ರಾ ಉಪನದಿಗೆ ಅಡ್ಡಲಾಗಿ ತಾನು ಕಟ್ಟುತ್ತಿರುವ ಅಣೆಕಟ್ಟಿನಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲವೆಂದು ಚೀನಾ ಸ್ಪಷ್ಟಪಡಿಸಿದೆ.
ಈ ಕುರಿತು ಚೀನಾದ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆಯೊಂದನ್ನು ನೀಡಿ, ಚೀನಾವು ಕ್ಸಿಬುಕು ನದಿಗೆ ಕಟ್ಟುತ್ತಿರುವ ಅಣೆಕಟ್ಟಿನಲ್ಲಿ, ಕ್ಸಿಬುಕು-ಬ್ರಹ್ಮಪುತ್ರಾ  ನದಿಗಳ ವಾರ್ಷಿಕ ಹರಿವಿನ ಶೇ.0.02ರಷ್ಟು ನೀರು ಮಾತ್ರವೇ ಸಂಗ್ರಹವಾಗಲಿದ್ದು, ಇದರಿಂದ ಭಾರತದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗದೆಂದು ಅದು ತಿಳಿಸಿದೆ.
ಬ್ರಹ್ಮಪುತ್ರಾ ನದಿಯ ಉಪನದಿಯಾದ ಕ್ಸಿಬುಕಗೆ ಅಣೆಕಟ್ಟು ನಿರ್ಮಾಣದಿಂದ ಟಿಬೆಟ್‌ನ ಜನತೆಗೆ ಉದ್ಯೋಗ ಹಾಗೂ ಆಹಾರ ಭದ್ರತೆಯನ್ನು ಸೃಷ್ಟಿಸಬಹುದಾಗಿದೆ. ಪ್ರವಾಹದ ಸಮಸ್ಯೆಯನ್ನು ನಿವಾರಿಸಬಹುದಾಗಿದೆಯೆಂದು ಬೀಜಿಂಗ್ ಹೇಳಿದೆ.
 ಬ್ರಹ್ಮಪುತ್ರಾ ನದಿಯು ಟಿಬೆಟ್‌ನಿಂದ ಭಾರತದ ರಾಜ್ಯಗಳಾದ ಅರುಣಾಚಲಪ್ರದೇಶ ಹಾಗೂ ಅಸ್ಸಾಂನಲ್ಲಿ ಹರಿದು. ಆನಂತರ ಬಾಂಗ್ಲಾದೆಡೆಗೆ ಸಾಗುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News