ಟ್ರಂಪ್ ಅಧ್ಯಕ್ಷನಾಗುವ ಕನಿಷ್ಠ ಪ್ರಾಮಾಣಿಕತೆ ಹೊಂದಿಲ್ಲ: ಒಬಾಮ

Update: 2016-10-12 14:34 GMT

ವಾಶಿಂಗ್ಟನ್, ಅ. 12: ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಅವರಲ್ಲಿ ತನ್ನ ಉತ್ತರಾಧಿಕಾರಿಯಾಗಲು ಇರಬೇಕಾದ ಸಮಚಿತ್ತತೆಯಾಗಲಿ, ಜ್ಞಾನವಾಗಲಿ, ಕನಿಷ್ಠ ಪ್ರಾಮಾಣಿಕತೆಯಾಗಲಿ ಇಲ್ಲ ಎಂದು ಹೇಳಿದ್ದಾರೆ.

‘‘ಅವರಲ್ಲಿ ಸಮಚಿತ್ತತೆಯಿಲ್ಲ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ, ಜ್ಞಾನವಿಲ್ಲ ಹಾಗೂ ಜ್ಞಾನ ಸಂಪಾದಿಸುವ ಇಚ್ಛೆಯೂ ಇಲ್ಲ, ಹಾಗೂ ಓರ್ವ ಅಧ್ಯಕ್ಷನಿಗಿರಬೇಕಾದ ಕನಿಷ್ಠ ಪ್ರಾಮಾಣಿಕತೆಯೂ ಇಲ್ಲ’’ ಎಂದು ನಾರ್ತ್ ಕ್ಯಾರಲೈನದಲ್ಲಿ ಮಂಗಳವಾರ ನಡೆಸಿದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಒಬಾಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News