ಭಾರತದಲ್ಲಿ ಪ್ರತಿದಿನ 550 ಉದ್ಯೋಗಾವಕಾಶಗಳು ಮಾಯ

Update: 2016-10-17 10:09 GMT

ಹೊಸದಿಲ್ಲಿ, ಅಕ್ಟೋಬರ್ 17: ಪ್ರತಿದಿವಸವೂ ಭಾರತದಲ್ಲಿ 550 ಉದ್ಯೋಗಗಳು ಅಪ್ರತ್ಯಕ್ಷಗೊಳ್ಳುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ. 2050ಕ್ಕಾಗುವಾಗ 70 ಲಕ್ಷ ಉದ್ಯೋಗಾವಕಾಶಗಳು ಇಲ್ಲವಾಗುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ. ಕೃಷಿ, ಸಣ್ಣವ್ಯಾಪಾರಿಗಳು, ಗುತ್ತೆಗೆ ಕಾರ್ಮಿಕರು , ನಿರ್ಮಾಣ ಕಾರ್ಮಿಕರು ಮುಂತಾದ ವಿಭಾಗಗಳು ಕೆಲಸ ಇಲ್ಲದಾಗುವ ಆತಂಕಕ್ಕೊಳಗಾಗುತ್ತಾರೆ ಎಂದು ದಿಲ್ಲಿ ಕೇಂದ್ರವಾಗಿ ಕಾರ್ಯಾಚರಿಸುವ ಸಂಘಟನೆ ಪ್ರಹರ್ ಬಹಿರಂಗಪಡಿಸಿದ ವರದಿಯಲ್ಲಿ ವಿವರಿಸಲಾಗಿದೆ. ಉದ್ಯೋಗಾವಕಾಶಗಳ ದರದಲ್ಲಿ ಪ್ರತಿವರ್ಷವೂ ದೊಡ್ಡ ಕೊರತೆ ಸೃಷ್ಟಿಯಾಗುತ್ತಿದೆ. 2015ರಲ್ಲಿ ಭಾರತದಲ್ಲಿ 1.35 ಲಕ್ಷ ಉದ್ಯೋಗ ಅವಕಾಶಗಳಿದ್ದರೆ, 2013ರಲ್ಲಿ ಇದು 4.19 ಲಕ್ಷ ಮತ್ತು 2011ರಲ್ಲಿ ಒಂಬತ್ತು ಲಕ್ಷ ಉದ್ಯೋಗವಕಾಶಗಳಿದ್ದವು ಎಂದು ವರದಿ ತಿಳಿಸಿದೆ.

ಈ ಸ್ಥಿತಿ ಮುಂದುವರಿದರೆ 2050ಕ್ಕಾಗುವಾಗ ದೇಶ ಗಂಭೀರವಾದ ನಿರುದ್ಯೋಗ ಸಮಸ್ಯೆಯನ್ನು ಎದುರಿಸಲಿದೆ. ಜನಸಂಖ್ಯೆ ಹೆಚ್ಚಳವಾದಂತೆ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದೆ ಎಂದು ಅಧ್ಯಯನ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News