ಟನ್ ಕಬ್ಬಿಗೆ 3 ಸಾವಿರ ರೂ. ನಿಗದಿಗೆ ರೈತರ ಆಗ್ರಹ

Update: 2016-10-18 18:34 GMT

ಬೆಂಗಳೂರು, ಅ.18: ಹಿಂದಿನ ವರ್ಷ ಒಂದು ಟನ್ ಕಬ್ಬಿಗೆ ನಿಗದಿಪಡಿಸಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಪುನರ್ ಪರಿಶೀಲಿಸಿ ಮೂರು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

,300 ನಗರದ ಗಾಂಭವನದಲ್ಲಿ ರೈತ ಸಂಘಟನೆಗಳ ಒಕ್ಕೂಟದ ಪದಾಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಟನ್ ಬ್ಬಿಗೆ ಹಿಂದಿನ ವರ್ಷ ನಿಗದಿಪಡಿಸಿದ್ದ ಕನಿಷ್ಠ ಬೆಂಬಲ ಬೆಲೆ ರೂ.ದರವನ್ನು ಯಥಾವತ್ತಾಗಿ ಈ ವರ್ಷವೂ ಮುಂದು
ವರಿಸಲಾಗಿದೆ. ಕೂಡಲೇ ಸರಕಾರ ಈ ಬೆಲೆಯನ್ನು ಪರಿಶೀಲಿಸಿ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಬ್ಬು ಬೆಳೆಗಾರರಿಗೆ ಕಳೆದ ವರ್ಷದ ಹಿಂಬಾಕಿಯನ್ನು ಪಾವತಿಸದೆ ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷ ಧೋರಣೆ ತಾಳುತ್ತಿವೆ. ಈಗಾಗಲೇ ಹಿಂಬಾಕಿ ಹಣ ನೀಡಲು ಸಾಕಷ್ಟು ಸಮಯ ವಿಳಂಬವಾಗಿದೆ. ಈ ವಿಳಂಬಕ್ಕೆ ಪ್ರತಿಯಾಗಿ ಸಕ್ಕರೆ ಕಾರ್ಖಾನೆಗಳು ಶೇ.15ರಷ್ಟು ಬಡ್ಡಿಯನ್ನು ಸೇರಿಸಿಕೊಡಬೇಕು. ಆದರೆ ಈ ಹಣದಲ್ಲೂ ಕಬ್ಬು ಬೆಳೆಗಾರರನ್ನು ಕಾರ್ಖಾನೆಗಳು ವಂಚಿಸುತ್ತಿವೆ ಎಂದು ಆರೋಪಿಸಿದ ಅವರು, ಸರಕಾರವೇ ಬಡ್ಡಿ ಸಮೇತ ಹಣವನ್ನು ವಸೂಲಿ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.ನ್ನು ಕಬ್ಬು ಖರೀದಿ ನಿಯಂತ್ರಣ ಕಾಯ್ದೆ ಪ್ರಕಾರ ಕಬ್ಬು ತ್ಪನ್ನಗಳ ಲಾಭಾಂಶದಲ್ಲಿ ಶೇ. 25ರಷ್ಟು ರೈತರಿಗೆ ಕಾರ್ಖಾನೆಳು ನೀಡಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ, ಕಳೆದ ವರ್ಷದ ಕಬ್ಬು ಹಂಗಾಮು ಮುಗಿದು ಆರು ತಿಂಗಳು ಕಳೆದರೂ ಲಾಭಾಂಶವನ್ನು ನೀಡಿಲ್ಲ. ಈ ಕುರಿತು ಸರಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ತೀವ್ರ ಬರಗಾಲದಿಂದ ಕಬ್ಬು ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಹೀಗಾಗಿ ಕಬ್ಬು ಬೆಳೆಗಾರರ ಸಾಲ ಮರುಪಾವತಿ ಅವಯನ್ನು ತಿಂಗಳಿಗೆ ವಿಸ್ತರಿಸಬೇಕು. ಕಾವೇರಿ ಕೊಳ್ಳದ ತೀರದಲ್ಲಿ ನೀರಿನ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಆದುದರಿಂದ ಕಬ್ಬು ಬೆಳೆಗಾರರಿಗೆ ಹನಿ ನೀರಾವರಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News