ತಾಂತ್ರಿಕ ಅಡ್ಡಿನಿವಾರಣೆಗೆ ಹೈಕೋರ್ಟ್ ಸೂಚನೆ

Update: 2016-10-18 18:38 GMT

ಬೆಂಗಳೂರು, ಅ.18: ಗಲ್ಲು ಶಿಕ್ಷೆಗೆ ತಡೆ ಕೋರಿ ವಿಕೃತಕಾಮಿ ಉಮೇಶ್‌ರೆಡ್ಡಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ.

  
   ಕಚೇರಿಯ ಆಕ್ಷೇಪಣೆ ಕ್ಲಿಯರ್ ಆದ ಮೇಲೆ ನ್ಯಾಯಾಲಯವುರ್ ಯ ವಿಚಾರಣೆ ನಡೆಸಲಿದೆ. ಕಚೇರಿ ಎತ್ತಿರುವ ತಾಂತ್ರಿಕ ನಿವಾರಿಸುವಂತೆ ಅರ್ಜಿದಾರರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.ಲ್ಲು ಶಿಕ್ಷೆಗೆ ಗುರಿ ಮಾಡುವುದಕ್ಕೆ ತಡೆ ನೀಡಬೇಕೆಂದು ಕೋರಿ ಉಮೇಶ್‌ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದ. ಆತ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ವಕೀಲರು ಮನವಿ ಮಾಡಿದ್ದರು. ಲ್ಲು ಶಿಕ್ಷೆ ಆದೇಶ ಪುನರ್ ಪರಿಶೀಲನೆ ಕೋರಿ ಉಮೇಶ್‌ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಅ.3ರಂದು ವಜಾಗೊಳಿಸಿದೆ. ರಾಷ್ಟ್ರಪತಿಗಳು ಅನಗತ್ಯವಾಗಿ ಕ್ಷಮಾದಾನದ ಅರ್ಜಿಯನ್ನು ವಿಳಂಬ ಮಾಡಿದ್ದಾರೆ. ಏಕಾಂತ ವಾಸದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಕ್ಷಮಾದಾನ ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಮಾನಸಿಕ ಸ್ಥಿತಿಗತಿಯ ಬಗ್ಗೆ ಅವರು ಅವಲೋಕಿಸಿಲ್ಲ. ಹೀಗಾಗಿ, ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಆತ ನ್ಯಾಯಾಲಯವನ್ನು ಕೋರಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುಮಾರು 18ಕ್ಕೂ ಹೆಚ್ಚು ಮಂದಿಯನ್ನು ಕೊಂದು 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮಿ ಎಂದೇ ಹೆಸರಾಗಿರುವ ಬಿ.ಎ.ಉಮೇಶ್‌ಗೆ ಬೆಂಗಳೂರಿನ ಅೀನ ನ್ಯಾಯಾಲಯವು 2006ರಲ್ಲಿ ಗಲ್ಲು ಶಿಕ್ಷೆ ವಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠ ಈ ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಸುಪ್ರೀಂಕೋರ್ಟ್ ಕೂಡ 2011ರಲ್ಲೇ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News