ಕೇರಳ: ಅಕ್ರಮ ಒಂದಂಕಿ ಲಾಟರಿ ವಿರುದ್ಧ ತನಿಖೆಗೆ ಆದೇಶ

Update: 2016-10-21 18:13 GMT

ತಿರುವನಂತಪುರ, ಅ.21: ರಾಜ್ಯದಲ್ಲಿಯ ಅಕ್ರಮ ಒಂದಂಕಿ ಲಾಟರಿ ದಂಧೆಯ ವಿರುದ್ಧ ದೂರುಗಳ ಬಗ್ಗೆ ಐಜಿಪಿ ಬಲರಾಮಕುಮಾರ ಉಪಾಧ್ಯಾಯ ಅವರ ನೇತೃತ್ವದ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಮೂಲಕ ತನಿಖೆಗೆ ಕೇರಳ ಸರಕಾರವು ಆದೇಶಿಸಿದೆ.

 ರಾಜ್ಯದಲ್ಲಿ ಹುಲುಸಾಗಿ ನಡೆಯುತ್ತಿರುವ ಅಕ್ರಮ ಒಂದಂಕಿ ಲಾಟರಿ ದಂಧೆಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಗೆ ಉತ್ತರಿಸಿದ ಹಣಕಾಸು ಸಚಿವ ಟಿ.ಎಂ.ಥಾಮಸ್ ಇಸಾಕ್ ಅವರು, ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್‌ಟಿಎಫ್ ವರದಿಯ ಆಧಾರದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಒಂದಂಕಿ ಲಾಟರಿ ಮಾಫಿಯಾವನ್ನು ಎದುರಿಸಲು ಸರಕಾರವು ಕೇರಳ ರಾಜ್ಯ ಲಾಟರಿಗಳ ಡ್ರಾ ಅನ್ನು ಪ್ರತಿದಿನ ಟಿವಿಯಲ್ಲಿ ನೇರಪ್ರಸಾರ ಮಾಡಲಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News