ಹಳಸಿದ ಮದುವೆಗೆ ಹೈಕೋರ್ಟ್ ವಿಚ್ಛೇದನ!

Update: 2016-10-23 13:25 GMT


ಹೊಸದಿಲ್ಲಿ, ಅ.23: ಪರಸ್ಪರರ ವಿರುದ್ಧ ವ್ಯಾಜ್ಯವೊಂದರಲ್ಲಿ ದಂಪತಿಯೊಂದು ಗರ್ಭಪಾತದ ದುರದೃಷ್ಟಕರ ಘಟನೆಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದುದು, ಅವರ ಹಳಸಿದ ಸಂಬಂಧದ ಸೂಚನೆ ನೀಡಿದೆಯೆಂದಿರುವ ದಿಲ್ಲಿ ಹೈಕೋರ್ಟ್ ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿದೆ.


ದಂಪತಿಯ ನಡುವಿನ ವಿವಾಹ ಸಂಬಂಧ ‘ಸಂಪೂರ್ಣ ಮುರಿದು ಬಿದ್ದಿದೆ’. ವಿಚಾರಣಾ ನ್ಯಾಯಾಲಯದ ಮುಂದೆ ಮರು ಪರಿಶೀಲನೆಗಾಗಿ ಹಲವು ಪ್ರಯತ್ನಗಳು ನಡೆದ ಹೊರತಾಗಿಯೂ ಅದು ದುರಸ್ತಿಯಾಗದ ಸ್ಥಿತಿ ತಲುಪಿದೆಯೆಂದು ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಾಜೋಗ್ ಹಾಗೂ ಪ್ರತಿಭಾ ರಾಣಿಯವರಿದ್ದ ಪೀಠವೊಂದು ಅಭಿಪ್ರಾಯಿಸಿದೆ.


ತನ್ನ ಸಮ್ಮತಿಯಿಲ್ಲದೆ ಪತ್ನಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂಬ ಪತಿ ಆರೋಪ ಸುಳ್ಳು. ಅದರಂತೆಯೇ ತನ್ನ ಗಂಡ ಹಾಗೂ ಅವನ ಮನೆಯವರ ಥಳಿತದಿಂದಾಗಿ ತನಗೆ ಗರ್ಭಪಾತವಾಗಿತ್ತೆಂಬ ಮಹಿಳೆಯ ಹೇಳಿಕೆಯ ಸಂಪೂರ್ಣ ಸುಳ್ಳೆಂದು ಅದು ಹೇಳಿದೆ.


ಈ ಗರ್ಭಪಾತ ಘಟನೆಗೆ ಹಿನ್ನೆಲೆ ಚಿತ್ರಿಸಿ, ಇಬ್ಬರೂ ಲಾಭ ಪಡೆಯುವ ಪ್ರಯತ್ನ ನಡೆಸಿರುವುದು, ಮದುವೆಯಾದ ಗಳಿಗೆಯಿಂದಲೇ ದಂಪತಿಯ ನಡುವಿನ ಸಂಬಂಧ ಅತ್ಯಂತ ಹಳಸಿ ಹೋಗಿತ್ತೆಂಬುದನ್ನು ಸೂಚಿಸುತ್ತದೆಯೆಂದು ಪೀಠ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅದು ಪತಿಯ ವಿಚ್ಛೇದನ ಕೋರಿಕೆಗೆ ಅನುಮತಿ ನೀಡಿ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News