ಸೈಕಲ್ ಕಳ್ಳರನ್ನು ಹಿಮ್ಮೆಟ್ಟಿಸಲು ವಾಂತಿ ಮಾಡಿಸುವ ಬೀಗ!

Update: 2016-10-23 18:44 GMT

ಸ್ಯಾನ್‌ಫ್ರಾನ್ಸಿಸ್ಕೊ, ಅ. 23: ಸೈಕಲ್ ಕಳ್ಳರೇ, ಎಚ್ಚರ! ಅಮೆರಿಕದ ಕಂಪೆನಿಯೊಂದು ನೂತನ ಮಾದರಿಯ ಸೈಕಲ್ ಬೀಗವೊಂದನ್ನು ಅಭಿವೃದ್ಧಿಪಡಿಸಿದೆ. ಈ ಬೀಗವನ್ನು ಮುರಿಯಲು ಕಳ್ಳರು ಪ್ರಯತ್ನಿಸುವಾಗ, ನಿಯಂತ್ರಿಸಲು ಸಾಧ್ಯವಾಗದ ರೀತಿಯಲ್ಲಿ ಅವರು ವಾಂತಿ ಮಾಡುವಂತೆ ಇದು ಮಾಡುತ್ತದಂತೆ!

‘ಸ್ಕನ್‌ಲಾಕ್’ ಎಂಬ ಹೆಸರಿನ ಬೀಗದ ಸಂಶೋಧಕರ ಪೈಕಿ ಓರ್ವರಾಗಿರುವ ಸ್ಯಾನ್‌ಫ್ರಾನ್ಸಿಸ್ಕೊ ನಿವಾಸಿ ಡೇನಿಯಲ್ ಇಝ್‌ಕೊವ್‌ಸ್ಕಿ ಅವರ ಸೈಕಲ್ ಕಳ್ಳತನವಾಗಿತ್ತು. ಇದರಿಂದ ಬೇಸತ್ತ ಅವರು ಸೈಕಲ್ ಕಳ್ಳತನ ತಡೆಯುವ ನೂತನ ವಿಧಾನವೊಂದರ ಸಂಶೋಧನೆಗೆ ಮುಂದಾದರು.

ಅವರು ಇನ್ನೋರ್ವ ಸಂಶೋಧಕ ಯವೆಸ್ ಪೆರೆನೌಡ್ ಜೊತೆ ಸೇರಿ ಇಂಗ್ಲಿಷ್‌ನ ‘ಯು’ ಆಕಾರದ ಇಂಗಾಲ ಮತ್ತು ಉಕ್ಕು ಮಿಶ್ರಣದ ಬೀಗವನ್ನು ತಯಾರಿಸಿದರು. ಅದರಲ್ಲಿ ಒಂದು ಸ್ಥಳದಲ್ಲಿ ‘ಫಾರ್ಮುಲಾ ಡಿ-1’ ಎಂಬ ಹೆಸರಿನ ಅನಿಲವನ್ನು ತುಂಬಿಸಿದರು. ಕಳ್ಳರು ಬೀಗವನ್ನು ಸುಮಾರು 30 ಶೇಕಡದಷ್ಟು ಕತ್ತರಿಸಿದಾಗ ಅನಿಲ ಹೊರಬರುತ್ತದೆ ಹಾಗೂ ಸಮೀಪದಲ್ಲಿದ್ದವರಲ್ಲಿ ನಿಯಂತ್ರಿಸಲಾಗದ ವಾಂತಿಯನ್ನು ಉದ್ದೀಪಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News