ರೈಲ್ವೇ ಇಲಾಖೆಯಿಂದ 4 ಲಕ್ಷ ರೂ. ಅಪಘಾತ ವಿಮೆ ಕೊಡುಗೆ

Update: 2016-11-11 17:10 GMT

ಭುವನೇಶ್ವರ, ನ.11: ಸೀಸನ್ ಟಿಕೆಟ್ ಹೊಂದಿದವರಿಗೆ 4 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯವನ್ನು ಘೋಷಿಸಿರುವ ರೈಲ್ವೇ ಇಲಾಖೆ, ನಿತ್ಯ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಂಡು ಪ್ರತೀ ಬಾರಿ ಪ್ರಯಾಣಿಸುವಾಗ ಕೊನೆ ಗಳಿಗೆಯಲ್ಲಿ ಟಿಕೆಟ್ ಖರೀದಿಸುವ ಆತಂಕದಿಂದ ಮುಕ್ತರಾಗಬೇಕು ಎಂದು ಸಲಹೆ ಮಾಡಿದೆ.
 ತಿಂಗಳ ಸೀಸನ್ ಟಿಕೆಟ್(ಎಂಎಸ್‌ಟಿ) ಹೊಂದಿದ ಪ್ರಯಾಣಿಕರು 1ರಿಂದ 20 ಕಿ.ಮೀ. ವರೆಗಿನ ಪ್ರಯಾಣಕ್ಕೆ ತಿಂಗಳಿಗೆ ( ಬಂದು- ಹೋಗುವ ಪ್ರಯಾಣ) ಪಾವತಿಸಬೇಕಾದ ಮೊತ್ತ ಕೇವಲ 100 ರೂ. ಆದರೆ ಇದೇ ದೂರವ್ಯಾಪ್ತಿಯ ಪ್ರಯಾಣಕ್ಕೆ ಪ್ರತೀ ದಿನ ಟಿಕೆಟ್ ಪಡೆದು ಪ್ರಯಾಣಿಸಿದರೆ ತಿಂಗಳಿಗೆ 600 ರೂ. ಪಾವತಿಸಬೇಕಾಗುತ್ತದೆ. ಇದರಿಂದ ತಿಂಗಳಿಗೆ 500 ರೂ. ಉಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News