ಅತ್ಯಾಚಾರ ಆರೋಪಿ ಆರ್‌ಜೆಡಿ ಸಂಸದನ ಜಾಮೀನು ರದ್ದು

Update: 2016-11-24 10:57 GMT

ಹೊಸದಿಲ್ಲಿ,ನ.24: ಅಪ್ರಾಪ್ರ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಆರ್‌ಜೆಡಿ ಶಾಸಕ ರಾಜವಲ್ಲಭ ಯಾದವ್‌ಗೆ ಪಾಟ್ನಾ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯವು ಇಂದು ರದ್ದುಗೊಳಿಸಿದೆ.

ಅತ್ಯಾಚಾರ ಪ್ರಕರಣದ ವಿಚಾರಣೆಯು ಮುಗಿಯುವವರೆಗೆ ತಾನು ರಾಜ್ಯದಿಂದ ಹೊರಗಿರುವುದಾಗಿ ಮುಚ್ಚಳಿಕೆಯನ್ನು ನೀಡಲು ಯಾದವ್ ಒಪ್ಪಿಕೊಂಡಿದ್ದರಾದರೂ ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು.

ಯಾದವ್ ವಿರುದ್ಧದ ಆರೋಪವು ಗಂಭೀರ ಸ್ವರೂಪದ್ದಾಗಿದೆ ಮತ್ತು ಅವರು ಪ್ರಕರಣದಲ್ಲಿಯ ಸಾಕ್ಷಿಗಳ ಮೇಲೆ ಪ್ರಭಾವವನ್ನು ಬೀರಬಹುದು ಎಂದು ನ್ಯಾಯಮೂರ್ತಿ ಗಳಾದ ಎ.ಕೆ.ಸಿಕ್ರಿ ಮತ್ತು ಎ.ಎಂ.ಸಪ್ರೆ ಅವರನ್ನೊಳಗೊಂಡ ಪೀಠವು ಹೇಳಿತು.

ಪಾಟ್ನಾ ಉಚ್ಚ ನ್ಯಾಯಾಲಯವು ಯಾದವ್‌ಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಬಿಹಾರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News