ಅಮೃತಸರದಲ್ಲಿ ಚುನಾವಣೆಗೆ ಸ್ಪರ್ಧಿಸಿ : ಜೇಟ್ಲಿಗೆ ಅಮರೀಂದರ್ ಸವಾಲು

Update: 2016-12-02 08:37 GMT

ಹೊಸದಿಲ್ಲಿ,ಡಿಸೆಂಬರ್ 2: ಅಮೃತಸರಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿತ್ತಸಚಿವ ಅರುಣ್ ಜೇಟ್ಲಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸವಾಲು ಹಾಕಿದ್ದಾರೆಂದು ವರದಿಯಾಗಿದೆ.ಅಮೃತಸರದಲ್ಲಿ ನಡೆಯುವ ಉಪಚುನಾವಣೆ ಪ್ರಧಾನಿಯ ನೋಟು ಅಮಾನ್ಯಗೊಳಿಸಿದ ಕ್ರಮಕ್ಕೆ ಉತ್ತರವಾಗಲಿದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಜೇಟ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಅಂದು ಜೇಟ್ಲಿಯನ್ನು ಅಮರೀಂದರ್ ಸಿಂಗ್ ಸೋಲಿಸಿದ್ದರು. ಲೋಕಸಭೆಗೆ ಸ್ಫರ್ಧಿಸಿ ಸೋತಜೇಟ್ಲಿ ಸಚಿವರಾದರು.

ನಂತರ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮುಂದಿನ ವರ್ಷ ಪಂಜಾಬ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕಾಗಿ ಅಮರೀಂದರ್ ಸಿಂಗ್ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಪಂಜಾಬ್‌ನ ವಿಧಾನಸಭೆಯ ಎಲ್ಲ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅಮರೀಂದರ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ ಸರಕಾರ ದೇಶದಲ್ಲಿ ನಾಝಿ ಆಶಯಗಳನ್ನು ಜಾರಿಗೆ ತರುತ್ತಿದ್ದೆ ಎಂದು ಅವರುಆರೋಪಿಸಿದ್ದಾರೆ. ಸೈಬರ್ ಸುರಕ್ಷಿತೆಯನ್ನು ದೃಢಪಡಿಸದೆ ಇಡೀ ದೇಶ ಹೇಗೆ ಸಂಪೂರ್ಣ ಡಿಜಿಟಲ್ ಹಣವ್ಯವಹಾರಕ್ಕೆ ಬದಲಾದೀತು ಎಂದು ಅವರುಮೋದಿಯನ್ನು ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News