ಚಿಕ್ಕರಾಯಪ್ಪ, ಜಯಚಂದ್ರ ಅಕ್ರಮ ಸಂಪತ್ತು: ತನಿಖೆಗೆ ಸಿಬಿಐ, ಇಡಿ ಸಿದ್ಧತೆ

Update: 2016-12-02 08:22 GMT

ಬೆಂಗಳೂರು, ಡಿ.2: ರಾಜ್ಯ ಸರಕಾರದ ಸೇವೆಯಿಂದ ಅಮಾನತುಗೊಂಡಿರುವ ಭ್ರಷ್ಟ ಅಧಿಕಾರಿಗಳಾದ ಟಿಎನ್ ಚಿಕ್ಕರಾಯಪ್ಪ ಹಾಗೂ ಎಸ್‌ಸಿ ಜಯಚಂದ್ರ ಅವರ ವಿರುದ್ಧ ನಾಲ್ಕು ಕಡೆಗಳಿಂದ ತನಿಖೆ ಆರಂಭವಾಗಲಿದೆ.

ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಐಟಿ ಇಲಾಖೆ ತನಿಖೆಗೆ ಸಿದ್ಧತೆ ನಡೆಸುತ್ತಿವೆ. ಮತ್ತೊಂದೆಡೆ, ಭ್ರಷ್ಟಾಚಾರ ನಿಗ್ರಹ ದಳವು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆಗೆ ಮುಂದಾಗಿದೆ. ಭ್ರಷ್ಟ ಅಧಿಕಾರಿಗಳ ಬಳಿ ಸುಮಾರು 157 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಭಾಗಿಯಾಗಿರುವ ಕಾರಣ ಸಿಬಿಐ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲು ಸಿದ್ಧತೆ ನಡೆಸಿದೆ. ಈ ಇಬ್ಬರು ಭ್ರಷ್ಟರು ತಮಿಳುನಾಡಿನ ಈರೋಡ್ ಜಿಲ್ಲೆಯ ಖಾಸಗಿ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದ್ದು, ಆ ನಿಟ್ಟಿಯಲ್ಲಿ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News