ಜಯಲಲಿತಾ ಇನ್ನಿಲ್ಲ : ಅಪೋಲೊ ಆಸ್ಪತ್ರೆಯಿಂದ ಮಾಧ್ಯಮ ಪ್ರಕಟಣೆ

Update: 2016-12-05 19:31 GMT

ಚೆನ್ನೈ,ಡಿ.4: ಕಳೆದ ಮೂರು ತಿಂಗಳುಗಳಿಂದ ಅನಾರೋಗ್ಯದಿಂದಾಗಿ ಇಲ್ಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಸಿಎಂ ಜೆ.ಜಯಲಲಿತಾ ಅವರು ಸೋಮವಾರ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯಸಿರೆಳೆ ದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಜಯಲಲಿತಾರ ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಶೋಕಾಚರಣೆಯನ್ನು ಘೋಷಿಸಲಾಗಿದೆ. ಸೋಮವಾರ ರಾತ್ರಿಯಿಂದಲೇ ಚೆನ್ನೈ ನಗರದಲ್ಲಿ ಬಸ್ ಮತ್ತು ಟ್ಯಾಕ್ಸಿಗಳು ಸಂಚಾರವನ್ನು ಸ್ಥಗಿತಗೊಂಡಿವೆ. ಎಲ್ಲ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿಸಲಾಗಿದ್ದು, ಎಲ್ಲ ಕಡೆಗೆ ಪೊಲೀಸ್ ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ರಾಜ್ಯದಲ್ಲಿಯ ಎಲ್ಲ ಶಾಲಾಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಬಹುಅಂಗಾಂಗ ವೈಫಲ್ಯದಿಂದಾಗಿ ಸೆಪ್ಟೆಂಬರ್ 22ರಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರಿಗೆ ರವಿವಾರ ಸಂಜೆ ತೀವ್ರ ಹೃದಯಾಘಾತವಾಗಿತ್ತು. ಆನಂತರ ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿದ್ದ ಜಯಲಲಿತಾ ವೈದ್ಯರ ಹರಸಾಹಸದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 11:30ರ ವೇಳೆಗೆ ಕೊನೆಯುಸಿರೆಳೆದರೆಂದು ಅಪೊಲೋ ಆಸ್ಪತ್ರೆ ತಿಳಿಸಿವೆ.ಅಗಲಿದ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಅಪೋಲೊ ಆಸ್ಪತ್ರೆಯಿಂದ ಫೋಯೆಸ್ ಗಾರ್ಡನ್‌ನಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

► ತಮಿಳುನಾಡಿನಾದ್ಯಂತ ಶೋಕಾಚರಣೆ

► ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಕಂಬನಿ

► ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಜಯಾ ಅಂತಿಮ ದರ್ಶನಕ್ಕೆ ವ್ಯವಸ್ಥೆ

► ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಒ.ಪನ್ನೀರ್ ಸೇಲ್ವಂ ಎಐಡಿಎಂಕೆ ಶಾಸಕಾಂಗ ಪಕ್ಷದ ತುರ್ತು ಸಭೆಯಲ್ಲಿ ನಿರ್ಧಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News